ಸತತ ಮಳೆ: ಭಾರತ-ದಕ್ಷಿಣ ಆಫ್ರಿಕಾ 2ನೇ ಟೆಸ್ಟ್ ಡ್ರಾನಲ್ಲಿ ಅಂತ್ಯ

ಸತತ ಮಳೆಯಿಂದಾಗಿ ಭಾರತ-ದಕ್ಷಿಣ ಆಫ್ರಿಕಾ ನಡುವಿನ 2ನೇ ಟೆಸ್ಟ್ ಪಂದ್ಯ ನಾಲ್ಕನೇ ದಿನವೂ ಒಂದೂ ರನ್ ಗಳಿಸದೇ ಡ್ರಾ ನಲ್ಲಿ ಅಂತ್ಯಗೊಂಡಿದೆ. ...
ಕ್ರಿಕೆಟ್ ಪಿಚ್
ಕ್ರಿಕೆಟ್ ಪಿಚ್

ಬೆಂಗಳೂರು: ಸತತ ಮಳೆಯಿಂದಾಗಿ ಭಾರತ-ದಕ್ಷಿಣ ಆಫ್ರಿಕಾ ನಡುವಿನ 2ನೇ ಟೆಸ್ಟ್ ಪಂದ್ಯ ನಾಲ್ಕನೇ ದಿನವೂ  ಒಂದೂ ರನ್ ಗಳಿಸದೇ ಡ್ರಾ ನಲ್ಲಿ ಅಂತ್ಯಗೊಂಡಿದೆ.

ನಾಲ್ಕು ದಿನಗಳ ಕಾಲ ಮಳೆಯ ಆಟವೇ ಮುಂದುವರಿದುದರಿಂದ ಪಂದ್ಯ ಡ್ರಾ ಆಗುವುದು ಖಚಿತವಾಯಿತು. ಎರಡು ಮತ್ತು ಮೂರನೇ ದಿನದಾಟ ಮಳೆ ಮತ್ತು ಮಂದ ಬೆಳಕಿನ ಕಾರಣ ರದ್ದಾಗಿತ್ತು. ನಾಲ್ಕನೇ ದಿನ ಮೂರು ಭಾರಿ ಫೀಲ್ಡ್ ಅಂಪೈರ್‌ಗಳು ಪಿಚ್ ಮತ್ತು ಔಟ್ ಫೀಲ್ಡ್ ಪರಿಶೀಲಿಸಿದ ನಂತರ ಅಧಿಕೃತವಾಗಿ 2.30ಕ್ಕೆ ದಿನದಾಟವನ್ನು ರದ್ದುಗೊಳಿಸಿದರು.

4ನೇ ದಿನವಾದ ಇಂದೂ ತೇವಾಂಶ ಹಾಗೂ ಮಳೆಯಿಂದಾಗಿ ಪಂದ್ಯ ಡ್ರಾ ನಲ್ಲಿ ಅಂತ್ಯವಾಯಿತು. ಪ್ರವಾಸಿ ದಕ್ಷಿಣ ಆಫ್ರಿಕಾ ತಂಡದ ಆಟಗಾರ ಎಬಿಡಿ ವಿಲಿಯರ್ಸ್ ಅವರಿಗೆ 100 ನೇ ಮ್ಯಾಚ್ ಇದಾಗಿತ್ತು.

ಬೆಳಗ್ಗೆ 9.15 ಕ್ಕೆ ಪಂದ್ಯ ಆರಂಭವಾಗಬೇಕಿತ್ತು. ಆದರೆ 11.30ರ ವೇಳೆಗೆ ಮೈದಾನ ಪರಿಶೀಲಿಸಿದ  ಅಂಪೈರ್ ಗಳು ಪಂದ್ಯ ರದ್ದುಗೊಳಿಸಲು ನಿರ್ಧರಿಸಿದರು. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ನಾಲ್ಕು ದಿನಗಳ ಪಂದ್ಯ ಮಳೆಯಲ್ಲಿ ಕೊಚ್ಚಿ ಹೋಗಿದ್ದು ಇದೇ ಮೊದಲು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com