
ಜೂರಿಚ್: ತಮ್ಮ ಮೇಲಿನ ನಿಷೇಧದ ವಿರುದ್ಧ ಅಂತಾರಾಷ್ಟ್ರೀಯ ಫುಟ್ ಬಾಲ್ ಸಂಸ್ಥೆ (ಫಿಫಾ)ಯ ಮಾಜಿ ಅಧ್ಯಕ್ಷ ಸೆಪ್ ಬ್ಲಾಟರ್, ಯೂರೋಪಿಯನ್ ಫುಟ್ ಬಾಲ್ ಅಧ್ಯಕ್ಷ ಮೈಕಲ್ ಪ್ಲಾಟಿನಿಯವರು ಸಲ್ಲಿಸಿದ್ದ ಮೇಲ್ಮನವಿಯನ್ನು ಫಿಫಾ ವಜಾಗೊಳಿಸಿದೆ.
ಭ್ರಷ್ಟಾಚಾರದ ಆರೋಪ ಹೊತ್ತಿರುವ ಈ ಇಬ್ಬರ ವಿರುದ್ಧ ಸ್ವಿಜರ್ಲೆಂಡ್ ಸರ್ಕಾರ ತನಿಖೆಗೆ ಆದೇಶಿಸಿದ ಬೆನ್ನಲ್ಲೇ, ಈ ಇಬ್ಬರ ಮೇಲೆ 90 ದಿನಗಳ ಕಾಲ ಯಾವುದೇ ಫುಟ್ ಬಾಲ್ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ನಿಷೇಧ ಹೇರಿ ಫೆ.26 ರಂದು ಫಿಫಾ ಆಡಳಿತ ಮಂಡಳಿ ಆದೇಶ ಹೊರಡಿಸಿತ್ತು.
ಆದರೆ ಈ ಆರೋಪವನ್ನು ಅಲ್ಲಗಳೆದಿದ್ದ ಬ್ಲಾಟರ್ ಹಾಗೂ ಪ್ಲಾಟಿನಿ ತಮ್ಮ ವಿರುದ್ಧದ ಆದೇಶ ಪ್ರಶ್ನಿಸಿ, ಫಿಫಾ ಆಡಳಿತ ಮಂಡಳಿಗೆ ಇತ್ತೀಚೆಗೆ ಮೇಲ್ಮನವಿ ಸಲ್ಲಿಸಿದ್ದರು.
Advertisement