
ಲಂಡನ್: ಋತುವಿನಾದ್ಯಂತ ಭರ್ಜರಿ ಪ್ರದರ್ಶನ ನೀಡುತ್ತಾ ಸಾಗಿದ್ದ ವಿಶ್ವದ ನಂ.1 ಆಟಗಾರ ಸರ್ಬಿಯಾ ಆಟಗಾರ ನೊವಾಕ್ ಜೊಕೊವಿಚ್ ಅವರ ಗೆಲುವಿನ ಅಭಿಯಾನಕ್ಕೆ ರೋಜರ್ ಫೆಡರ್ ತೆರೆ ಎಳೆದಿದ್ದಾರೆ.
ಮಂಗಳವಾರ ತಡರಾತ್ರಿ ನಡೆದ ಎಟಿಪಿ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸ್ವಿಜರ್ಲೆಂಡ್‍ನ ಆಟಗಾರ, 17 ಗ್ರಾಂಡ್‍ಸ್ಲಾಂ ಪ್ರಶಸ್ತಿಗಳ ಒಡೆಯ ರೋಡರ್ ಫೆಡರರ್, ಅಗ್ರಶ್ರೇಯಾಂಕಿತ ಆಟಗಾರ ನೊವಾಕ್ ಜೊಕೊವಿಚ್ ಅವರನ್ನು 7-5, 6-೨ ನೇರಸೆಟ್‍ಗಳಿಂದ ಸೋಲಿಸಿ, ಉಪಾಂತ್ಯಕ್ಕೆ ಕಾಲಿಟ್ಟರು. ಈ ಮೂಲಕ, ತಮ್ಮ ವಿರುದ್ಧ ಜೊಕೊವಿಚ್ ಗಳಿಸಿದ್ದ ಸತತ 15 ಗೆಲುವಿನ ಓಟಕ್ಕೆ ಫೆಡರರ್ ಬ್ರೇಕ್ ಹಾಕಿದರು.
ಮಂಗಳವಾರ ನಡೆದ ಫೆಡರರ್ ವಿರುದ್ಧದ ಪಂದ್ಯದಲ್ಲಿ ಜೊಕೊವಿಚ್ ಅವರೇ ಗೆಲ್ಲುವರೆಂದು ಅವರ ಅಭಿಮಾನಿಗಳು ನಂಬಿಕೊಂಡಿದ್ದರು. ಆದರೆ, ಫಲಿತಾಂಶ ಇವರ ನಂಬಿಕೆಯನ್ನು ಬುಡಮೇಲು ಮಾಡಿತು. ಮಿಂಚಿನ ಆಟ ಪ್ರದರ್ಶಿಸಿದ ಫೆಡರರ್, ಜೊಕೊ ವಿರುದದ್ಧ ದಿಟ್ಟತನದ ಹೋರಾಟ ತೋರಿದರು.
ಯಾವುದೇ ತಪ್ಪೆಸಗದೇ ಎಚ್ಚರಿಕೆಯ ಹೆಜ್ಜೆಯಿಟ್ಟರು. ಅತ್ತ, ಜೊಕೊವಿಚ್ ಮಿಂಚಿನ ಹೋರಾಟ ನೀಡಿದ್ದರಿಂದ ದೀರ್ಘಕಾಲಕ್ಕೆ ಸಾಗಿ ಫೆಜರರ್ ಮೊದಲ ಸೆಟ್ ಅನ್ನು 7-5ರಲ್ಲಿ ವಶಪಡಿಸಿ ಕೊಂಡರು. ಅದೇ ಉಮೇದಿನಲ್ಲಿ ಎರಡನೇ ಸೆಟ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ಅವರು, ತೀವ್ರ ಹೋರಾಟ ನೀಡುತ್ತಿದ್ದ ಜೊಕೊವಿಚ್ ಅವರನ್ನು ಹಿಂದಿಕ್ಕಿ ಜಯ ಸಾಧಿಸಿದರು.
ನಡಾಲ್‍ಗೆ ವಿಜಯ: ಪ್ರಸಕ್ತ ಸಾಲಿನಲ್ಲಿ ಕಳಪೆ ಫಾರ್ಮ್ ನಿಂದ ಕಂಗೆಟ್ಟಿದ್ದ ಸ್ಪೇನ್‍ನ ರಾಫೆಲ್ ನಡಾಲ್, ಈ ಟೂರ್ನಿಯಲ್ಲಿ ಮತ್ತೆಮ್ಮೆ ಲಯ ಕಂಡುಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಬುಧವಾರ ನಡೆದ ಪಂದ್ಯದಲ್ಲಿ ಬ್ರಿಟನ್‍ನ ಆ್ಯಂಡಿ ಮರ್ರೆ ವಿರುದಟಛಿ 6--4, 6-1 ಸೆಟ್‍ಗಳ ಅಂತರದಲ್ಲಿ ಜಯಿಸಿದರು.
Advertisement