ನಜಾಂ ಸೇಥಿ
ಕ್ರೀಡೆ
ಭಾರತದಲ್ಲಿ ಕ್ರಿಕೆಟ್ ಆಡಲು ಭಾರತ ಸರ್ಕಾರ ಅನುಮತಿ ನೀಡಿಲ್ಲ: ಪಿಸಿಬಿ
ಡಿಸೆಂಬರ್ ನಲ್ಲಿ ನಡೆಯಬೇಕಿದ್ದ ಭಾರತ-ಪಾಕಿಸ್ತಾನ ಕ್ರಿಕೆಟ್ ಸರಣಿ ಮುಂದೂಡುತ್ತಿರುವುದಕ್ಕೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಸೂಕ್ತ ಕಾರಣ ನೀಡಿದೆ...
ಡಿಸೆಂಬರ್ ನಲ್ಲಿ ನಡೆಯಬೇಕಿದ್ದ ಭಾರತ-ಪಾಕಿಸ್ತಾನ ಕ್ರಿಕೆಟ್ ಸರಣಿ ಮುಂದೂಡುತ್ತಿರುವುದಕ್ಕೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಸೂಕ್ತ ಕಾರಣ ನೀಡಿದೆ.
ಭದ್ರತೆ ದೃಷ್ಟಿಯಿಂದ ಭಾರತದಲ್ಲಿ ಪಾಕಿಸ್ತಾನ ತಂಡ ಕ್ರಿಕೆಟ್ ಆಡಲು ಅನುಮತಿ ನಿರಾಕರಿಸಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ತಿಳಿಸಿದೆ. ಸರ್ಕಾರ ಅನುಮತಿ ನೀಡದ ಹೊರತು ಪಾಕಿಸ್ತಾನ ತಂಡ ಭಾರತದಲ್ಲಿ ಪಂದ್ಯವಾಡಲು ಸಾಧ್ಯವಿಲ್ಲ ಎಂದು ಪಿಸಿಬಿ ಕಾರ್ಯಕಾರಿಣಿ ಸಮಿತಿ ಮುಖ್ಯಸ್ಥ ನಜಾಮ್ ಸೇಥಿ ಹೇಳಿದ್ದಾರೆ,
ಆದರೆ ಭಾರತ ಯುಎಇಯಲ್ಲಿ ಸರಣಿ ಆಡಲು ಇಷ್ಟ ಪಡುತ್ತಿಲ್ಲ. ಇದಕ್ಕೆ ಕಾರಣ ಏನು ಎಂಬುದು ತಿಳಿದಿಲ್ಲ ಎಂದು ಅವರು ಹೇಳಿದ್ದಾರೆ. ಮುಂದಿನ ಐಸಿಸಿ ಸಭೆ ದುಬೈನಲ್ಲಿ ನಡೆಯಲಿದೆ. ಈ ವೇಳೆ ಶಶಾಂಕ್ ಮನೋಹರ್ ಜೊತೆ ಈ ಸಂಬಂಧ ಚರ್ಚಿಸಲಾಗುವುದು ಎಂದು ಅವರು ಹೇಳಿದ್ದಾರೆ. ಎರಡು ದೇಶಗಳ ವೈರತ್ವದಿಂದ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆಯಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ