ಫೈನಲ್‍ಗೆ ರಿಯಾ, ಪ್ರೇರಣಾ

ತೀವ್ರ ಕುತೂಹಲ ಕೆರಳಿಸಿದ್ದ ಮಹಿಳೆಯರಸಿಂಗಲ್ಸ್‍ನ ಉಪಾಂತ್ಯದ ಪಂದ್ಯದಲ್ಲಿ ಅತ್ಯಂತ ಆಕ್ರಮಣಕಾರಿ ಪ್ರದ ರ್ಶನ ನೀಡಿದ ಶ್ರೇಯಾಂಕ ರಹಿತ ಆಟಗಾರ್ತಿ...
ಟೆನ್ನಿಸ್
ಟೆನ್ನಿಸ್
Updated on
ಕಲಬುರಗಿ: ತೀವ್ರ ಕುತೂಹಲ ಕೆರಳಿಸಿದ್ದ ಮಹಿಳೆಯರಸಿಂಗಲ್ಸ್‍ನ ಉಪಾಂತ್ಯದ ಪಂದ್ಯದಲ್ಲಿ ಅತ್ಯಂತ ಆಕ್ರಮಣಕಾರಿ ಪ್ರದ ರ್ಶನ ನೀಡಿದ ಶ್ರೇಯಾಂಕ ರಹಿತ ಆಟಗಾರ್ತಿ ರಿಯಾ ಭಾಟಿಯಾ, ತನಗಿಂತಲೂ ಬಲಿಷ್ಠ ಆಟಗಾರ್ತಿಯಾದ ಈಟೀ ಮಹೆಟಾರನ್ನು ನೇರ ಸೆಟ್‍ಗಳಿಂದ ಸೋಲಿಸಿ, ಅಂತಿಮ ಸುತ್ತಿಗೆ ದಾಂಗುಡಿಯಿಟ್ಟರು. ಇತ್ತ ಇದಕ್ಕೂ ಮುನ್ನ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ, ಟೂರ್ನಿಯ ಅಗ್ರ ಶ್ರೇಯಾಂಕಿತೆ ಪ್ರೇರಣಾ ಭಾಂಬ್ರಿ ಐಟಿಎಫ್ ಮಹಿಳಾ ಟೆನಿಸ್ ಟೂರ್ನಿಯ ಅಂತಿಮ ಸುತ್ತನ್ನು ಪ್ರವೇಶಿಸಿದ್ದು, ರಿಯಾ ಜತೆ ಟ್ರೋಫಿಗಾಗಿ ಸೆಣಸಲಿದ್ದಾರೆ. 
ಬೆರಗುಗೊಳಿಸಿದ ಆಟ: 
ಚಂದ್ರಶೇಖರ್ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಎರಡನೇ ಉಪಾಂತ್ಯದ ಪಂದ್ಯದಲ್ಲಿ, ರಿಯಾ ಭಾಟಿಯಾ ಅದ್ಭುತ ಪ್ರದರ್ಶನ ನೀಡಿ ಎಲ್ಲರನ್ನೂ ನಿಬ್ಬೆರಗಾಗಿಸಿದರು. ಟೂರ್ನಿಯ 8ನೇ ಶ್ರೇಯಾಂಕಿತೆಯಾದ ಈಟಿ ವಿರುದ್ಧ 7-5, 7-5 ನೇರ ಸೆಟ್‍ಗಳಿಂದ ಜಯ ಸಾಧಿಸಿದರು. ಪಂದ್ಯದ ಆರಂಭದಲ್ಲಿ ಕೊಂಚ ನೀರಸ ಪ್ರದರ್ಶನ ನೀಡಿದ ರಿಯಾ, ಕೆಲ ಅಂಕಗಳನ್ನು ಬಿಟ್ಟುಕೊಟ್ಟರು. ಹಾಗಾಗಿ, ಮೊದಲ ನಾಲ್ಕು ಗೇಮ್ಗಳಲ್ಲಿ ಪಾರಮ್ಯ ಮರೆದ ಮಹೆಟಾ, 2-0 ಮುನ್ನಡೆ ಸಾಧಿಸಿ, ರಿಯಾಗೆ ಸವಾಲೆಸಿದರು. ಆದರೆ, ಇಲ್ಲಿಂದಾಚೆಗೆ ತಿರುಗಿಬಿದ್ದ ರಿಯಾ, ಮುಂದಿನ ಐದೂ ಗೇಮ್ಗಳನ್ನು ತಮ್ಮದಾಗಿಸಿಕೊಂಡರು. ಅತ್ತ, ಈಟೀಯಿಂದಲೂ ಪ್ರಬಲ ಸ್ಪರ್ಧೆ ಎದುರಾದ ಕಾರಣದಿಂದ ದೀರ್ಘಕಾಲದವರೆಗೆ ಸಾಗಿದ ಈ ಸೆಟ್‍ನಲ್ಲಿ ಅಂತಿಮವಾಗಿ ರಿಯಾ, 7-5 ಅಂತರದಲ್ಲಿ ಗೆಲುವು ಕಂಡರು. ಇನ್ನು, ಎರಡನೇ ಸೆಟ್‍ನಲ್ಲಿಯೂ ಇಬ್ಬರಿಂದ ಇದೇ ರೀತಿಯ ಹೋರಾಟ ಎದುರಾಯಿತು. ಆದರಿಲ್ಲಿ, ಮೊದಲಿ ನಿಂದಲೂ ಆಕ್ರಮಣಕ್ಕಿಳಿದ ರಿಯಾ, ನೋಡನೋಡುತ್ತಿದ್ದಂತೆ 3-1 ಗೇಮ್ಗಳ ಅಂತರ ದಾಖಲಿಸಿದರು. ಆನಂತರ, ಈ ಮುನ್ನಡೆ 5-3ಕ್ಕೆ ವಿಸ್ತಾರವಾಯಿತು. ಈ ಹಂತದಲ್ಲಿ, ಮಿಂಚಿನ ಆಟ ಪ್ರದರ್ಶಿಸಿದ ರಿಯಾ, ಸತತ ನಾಲ್ಕು ಗೇಮ್ಗಳನ್ನು ಗೆಲ್ಲುವ ಮೂಲಕ ಪುನಃ 7-5 ಅಂತರದ ಜಯ ಪಡೆದರು.
ಟಮಾಚನ್ ಮಣಿಸಿದ ಪ್ರೇರಣಾ 
ಇತ್ತ ವಿಶ್ವದ 479ನೇ ಶ್ರೇಯಾಂಕಿತೆಯಾದ ಪ್ರೇರಣಾ, ವಿಶ್ವದ 837ನೇ ಶ್ರೇಯಾಂಕಿತೆಯಾದ ಥಾಯ್ಲೆಂಡ್ ನ ಟಮಾಚನ್ ಮೊಮ್ಕೂನ್‍ಟೋಡ್ ವಿರುದ್ಧ ಸೆಣಸಿದ ಅವರು, ಕೇವಲ 57 ನಿಮಿಷಗಳ ಸೆಣಸಾಟದಲ್ಲಿ ಟಮಾಚನ್ ಅವರನ್ನು 6-3, 6-2 ಸೆಟ್‍ಗಳ ಅಂತರದಲ್ಲಿ ಮಣಿಸಿದರು. ಪಂದ್ಯದ ಆರಂಭದಿಂದಲೂ ಥಾಯ್ಲೆಂಡ್ ಆಟಗಾರ್ತಿ ಎದುರು ಹತೋಟಿ ಸಾಧಿಸಿದ ಪ್ರೇರಣಾ, ಮೊದಲ ಸೆಟ್‍ನ ಆರನೇ ಹಾಗೂ ಎಂಟನೇ ಗೇಮ್ಗಳಲ್ಲಿ ಎರಡು ಬಾರಿ ಬ್ರೇಕ್ ಪಾಯಿಂಟ್‍ಗಳನ್ನು ಪಡೆದರು. ಇನ್ನು, ಎರಡನೇ ಸೆಟ್‍ನ ಮೊದಲ ಹಾಗೂ ಏಳನೇ ಗೇಮ್ ಗಳಲ್ಲೂ ಮತ್ತೆರಡು ಬಾರಿ ಬ್ರೇಕ್ ಪಾಯಿಂಟ್‍ಗಳನ್ನು ಪಡೆದಿದ್ದು ಅವರಿಗೆ ಗೆಲುವಿಗೆ ನೆರವಾಯಿತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com