ನವದೆಹಲಿ: ಬಹು ನಿರೀಕ್ಷಿತ ಭಾರತ ಹಾಗೂ ಪಾಕಿಸ್ತಾನ ದ್ವಿಪಕ್ಷೀಯ ಸರಣಿಯ ಬಗೆಗಿನ ನಿರೀಕ್ಷೆ ಮತ್ತೊಮ್ಮೆ ಕುಡಿಯೊಡೆದಿದೆ. ನ. 21ರಂದು ದುಬೈನಲ್ಲಿ, ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಅಧ್ಯಕ್ಷ ಶಶಾಂಕ್ ಮನೋಹರ್ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಶಹರ್ಯಾರ್ ಖಾನ್ ಭೇಟಿಯಾಗಿ ದ್ವಿಪಕ್ಷೀಯ ಸರಣಿ ಬಗ್ಗೆ ಮಾತುಕತೆ ನಡೆಸುವ ಸಾಧ್ಯತೆಗಳು ಇವೆ ಎನ್ನಲಾಗಿದೆ. ಐಸಿಸಿಗೆ ಬಿಸಿಸಿಐನ ಪ್ರತಿನಿಧಿಯಾಗಿ ಹೊಸತಾಗಿ ನೇಮಕವಾಗಿರುವ ಹಿನ್ನೆಲೆಯಲ್ಲಿ ಇದಕ್ಕೆ ಸಂಬಂಧಪಟ್ಟ ಕಚೇರಿ ಕೆಲಸ ಮುಗಿಸಲು ಶಶಾಂಕ್ ಮನೋಹರ್ ದುಬೈನಲ್ಲಿನ ಐಸಿಸಿ ಕೇಂದ್ರ ಕಚೇರಿಗೆ ಶುಕ್ರವಾರ ತೆರಳಿದ್ದಾರೆ. ಪ್ರಸ್ತುತ, ಶಹರ್ಯಾರ್ ಖಾನ್ ಸಹ ಕಾರ್ಯನಿಮಿತ್ತ ದುಬೈನಲ್ಲಿದ್ದಾರೆ.