
ಲಂಡನ್: ವಿಶ್ವದ ನಂ.1 ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಚ್ ಭಾನುವಾರವಷ್ಟೇ ಮುಕ್ತಾಯ ಕಂಡ ಎಟಿಪಿ ವಲ್ರ್ಡ್ ಟೂರ್ ಟೆನಿಸ್ ಚಾಂಪಿಯನ್ ಶಿಪ್‍ನಲ್ಲಿ ಮತ್ತೊಮ್ಮೆ ಚಾಂಪಿಯನ್ ಎನಿಸಿದರು.
ತಡರಾತ್ರಿ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ 17 ಗ್ರಾಂಡ್‍ಸ್ಲಾಂ ಪ್ರಶಸ್ತಿಗಳ ಒಡೆಯ ರೋಜರ್ ಫೆಡರರ್ ವಿರುದ್ಧ ಜೊಕೊವಿಚ್ 6-3, 6-4ರ ಎರಡು ನೇರ ಹಾಗೂ ಸುಲಭ ಸೆಟ್‍ಗಳಲ್ಲಿ ಗೆಲುವು ಪಡೆದರು. ಇದರೊಂದಿಗೆ ಎಟಿಪಿ ವಲ್ರ್ಡ್ ಟೂರ್‍ನ 45 ವರ್ಷಗಳ ಇತಿಹಾಸದಲ್ಲಿ ಸತತ ನಾಲ್ಕನೇ ಬಾರಿಗೆ ಪ್ರಶಸ್ತಿ ಜಯಿಸಿದ ವಿಶ್ವದ ಮೊದಲ ಆಟಗಾರ ಎನಿಸಿದರು. ಇನ್ನೊಂದೆಡೆ ಐದು ಬಾರಿ ಈ ಪ್ರಶಸ್ತಿ ಜಯಿಸಿರುವ ಅಮೆರಿಕಾದ ಪಿತ ಸಾಂಪ್ರಾಸ್ ಹಾಗೂ ಜೆಕೊಸೊವೇಕಿಯಾದ ಇವಾನ್ ಲೆಡ್ಲ್ ಅವರ ಸಾಧನೆಯನ್ನೂ ಜೋಕೊವಿಚ್ ಸರಿಗಟ್ಟಿದರು.
ಅಂದಹಾಗೆ ಈ ಪ್ರತಿಷ್ಠಿತ ಟೂರ್ನಿಯಲ್ಲಿ ಸ್ವಿಸ್ ಆಟಗಾರ ರೋಜರ್ ಫೆಡರರ್ 6 ಬಾರಿ ಪ್ರಶಸ್ತಿ ಗೆದ್ದು ಪ್ರಾಬಲ್ಯ ಮೆರೆದಿದ್ದಾರೆ. ಇನ್ನು ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಎರಡಕ್ಕಿಂತಲೂ ಹೆಚ್ಚು ಬಾರಿ ಫೆಡರರ್ ಸರ್ವ್ ಅನ್ನು ಮುರಿದಿದ್ದೇ ಅಲ್ಲದೇ ಸಂಪೂರ್ಣ ಆಕ್ರಮಣಕಾರಿ ಹೋರಾಟ ನಡೆಸಿದ ಜೋಕೊವಿಚ್, ಎರಡೂ ಸೆಟ್ ಗಳಲ್ಲಿ ಸುಲಭ ಗೆಲುವು ಪಡೆದರು. ಈ ಗೆಲುವಿನೊಂದಿಗೆ ಜಿಕೊವಿಚ್ ವರ್ಷದ 82 ನೇ ಗೆಲುವನ್ನು ದಾಖಲಿಸಿದರು. ಇನ್ನೊಂದೆಡೆ ಫೆಡರರ್ ಜತೆಗಿನ ಮುಖಾಮುಖಿಯನ್ನು 22-22ರಿಂದ ಸಮಗೊಳಿಸಿದರು.
ಶನಿವಾರ ನಡೆದ ಸೆಮಿ ಫೈನಲ್‍ನಲ್ಲಿ ಸ್ಪೇನ್‍ನ ರಾಫೆಲ್ ನಡಾಲ್ ವಿರುದ್ಧ ಗೆಲುವು ಸಾಧಿಸಿದ್ದ ಜೊಕೊವಿಚ್, ಈ ಎಡಗೈ ಆಟಗಾರನ ವಿರುದ್ಧವೂ 23-23ರ ಸಮಬಲ ಸಾಧಿಸುವಲ್ಲಿ ಯಶಸ್ವಿಯಾದರು.
Advertisement