ಇಂಡೋ ಪಾಕ್ ಕ್ರಿಕೆಟ್ ನಿಶ್ಚಿತ?

ಶ್ರೀಲಂಕಾದಲ್ಲಿ ಭಾರತ ಮತ್ತು ಪಾಕಿಸ್ತಾನ ಸರಣಿ ನಡೆಸಲು ನಿರ್ಧರಿಸಲಾಗಿದೆ ಎನ್ನಲಾಗಿದ್ದು, ಈ ಕುರಿತ ಅಂತಿಮ ನಿರ್ಣಯ ಇದೇ ತಿಂಗಳು 27ರಂದು ಅಧಿಕೃತವಾಗಿ ಪ್ರಕಟವಾಗುವ ಸಾಧ್ಯತೆ ಇದೆ.
ಇಂಡೋ ಪಾಕ್ ಕ್ರಿಕೆಟ್ ನಿಶ್ಚಿತ?
ಇಂಡೋ ಪಾಕ್ ಕ್ರಿಕೆಟ್ ನಿಶ್ಚಿತ?

ನವದೆಹಲಿ: ಭಾರತ-ಪಾಕಿಸ್ತಾನ ನಡುವಣ ಬಹುನಿರೀಕ್ಷಿತ ಕ್ರಿಕೆಟ್ ಸರಣಿಯ ಕುರಿತಂತೆ ಉಭಯ ದೇಶಗಳ ಕ್ರಿಕೆಟ್ ಮಂಡಳಿಯ ಅಧ್ಯಕ್ಷರು ಚರ್ಚೆ ನಡೆಸಿದ್ದು, ಈ ಎರಡು ದೇಶಗಳು ಶ್ರೀಲಂಕಾದಲ್ಲಿ ಸರಣಿ ನಡೆಸಲು ನಿರ್ಧರಿಸಿವೆ ಎನ್ನಲಾಗಿದ್ದು, ಈ ಕುರಿತ ಅಂತಿಮ ನಿರ್ಣಯ ಇದೇ ತಿಂಗಳು 27ರಂದು ಅಧಿಕೃತವಾಗಿ ಪ್ರಕಟವಾಗುವ ಸಾಧ್ಯತೆ ಇದೆ.
ಬಿಸಿಸಿಐನ ನೂತನ ಅಧ್ಯಕ್ಷ ಶಶಾಂಕ್ ಮನೋಹರ್ ಮತ್ತು ಪಿಸಿಬಿ ಅಧ್ಯಕ್ಷ  ಶಹರ್ಯಾರ್ ಖಾನ್ ಅವರ ದುಬೈ ಭೇಟಿಯ ಮೂಲ ಉದ್ದೇಶ ಉಭಯ ದೇಶಗಳ ನಡುವೆ ಮೂರು ಏಕದಿನ ಮತ್ತು ಎರಡು ಟಿ೨೦ ಪಂದ್ಯಗಳ ಸರಣಿಯನ್ನು ನಡೆಸುವುದಾಗಿತ್ತು.
ಶಶಾಂಕ್ ಮನೋಹರ್ ಆಹ್ವಾನದ ಮೇರೆಗೆ ಇಂಗ್ಲೆಂಡ್ ಕ್ರಿಟೆಟ್ ಮಂಡಳಿ ಅಧ್ಯಕ್ಷ ಗಿಲ್ಸ್ ಕ್ಲಾರ್ಕ್  ಮತ್ತು ಪಿಸಿಬಿ ಕಾರ್ಯಕಾರಿ ಸಮಿತಿ ಮುಖ್ಯಸ್ಥ ನಜಮ್ ಸೇತಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆಯ ಮುಖ್ಯ ಕಚೇರಿಯಲ್ಲಿ ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ ಯುಎಇನಲ್ಲಿ ಭಾರತ ಆಡುವುದಿಲ್ಲ ಎಂದು ಶಶಾಂಕ್ ಮತ್ತೊಮ್ಮೆ ಪುನರುಚ್ಚರಿಸಿದರೆ, ಪಾಕಿಸ್ತಾನ ಯಾವುದೇ ಕಾರಣಕ್ಕೂ ಭಾರತಕ್ಕೆ ಬರುವುದಿಲ್ಲ ಎಂದು
ಪಟ್ಟು ಹಿಡಿಯಿತು. ಅಂತಿಮವಾಗಿ ದ್ವೀಪರಾಷ್ಟ್ರ ಶ್ರೀಲಂಕಾವನ್ನು ಸರಣಿ ನಡೆಯುವ ತಟಸ್ಥ ತಾಣವಾಗಿಸಲು ಉಭಯ ಕ್ರಿಕೆಟ್ ಮಂಡಳಿಯ ಮುಖ್ಯಸ್ಥರೂ ನಿರ್ಧರಿಸಿದರು ಎಂದು ಪಿಟಿಐ ವರದಿ ಮಾಡಿದೆ. ಅಂದಹಾಗೆ ಇಂಡೋ-ಪಾಕ್ ಕ್ರಿಕೆಟ್ ಸರಣಿಯ ಆತಿಥ್ಯ ಹೊತ್ತುಕೊಳ್ಳಲು ಶ್ರೀಲಂಕಾ ಉತ್ಸುಕವಾಗಿದೆ ಎಂದೂ ಗೊತ್ತಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com