ಅಶ್ವಿನ್, ಜಡೇಜಾ ಕೈಚಳಕ: 79 ರನ್ನಿಗೆ ಆಲೌಟಾದ ದಕ್ಷಿಣ ಆಫ್ರಿಕಾ

ನಾಗ್ಪುರದಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತ ನಡುವಿನ 3ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್ ಗಳಾದ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ...
ಟೀ- ಇಂಡಿಯಾ ಆಟಗಾರರು
ಟೀ- ಇಂಡಿಯಾ ಆಟಗಾರರು
Updated on

ನಾಗ್ಪುರ: ನಾಗ್ಪುರದಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತ ನಡುವಿನ 3ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ  ಬೌಲರ್ ಗಳಾದ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ  ದಕ್ಷಿಣ ಆಫ್ರಿಕಾವನ್ನು ಬಗ್ಗು ಬಡಿದಿದ್ದಾರೆ. ಕ್ರಮವಾಗಿ 5 ಹಾಗೂ 4 ವಿಕೆಟ್ ಕಬಳಿಸಿದ ಇಬ್ಬರು ಪ್ರವಾಸಿಗರನ್ನು ಕೇವಲ 79 ರನ್ನುಗಳಿಗೆ ಮೊದಲ ಇನ್ನಿಂಗ್ಸ್‌ನಲ್ಲಿ ಕಟ್ಟಿ ಹಾಕಿದರು.

ಅಶ್ವಿನ್ 32 ರನ್‌ಗಳಿಗೆ 5 ವಿಕೆಟ್ ಕಿತ್ತರೆ ಜಡೇಜಾ 33 ರನ್ನುಗಳಿಗೆ 4 ವಿಕೆಟ್ ತಮ್ಮದಾಗಿಸಿಕೊಂಡರು. ದಿನದಾಟ ಆರಂಭವಾದಾಗ 2 ವಿಕೆಟ್ ನಷ್ಟಕ್ಕೆ 11 ರನ್ನುಗಳೊಂದಿಗೆ ದಕ್ಷಿಣ ಆಫ್ರಿಕಾ ತನ್ನ ಆಟಕ್ಕೆ ಚಾಲನೆ ನೀಡಿತ್ತು. ಭಾರತವು ಮೊದಲ ಇನ್ನಿಂಗ್ಸ್‌ನಲ್ಲಿ 215 ರನ್‌ಗಳಿಗೆ ಆಲೌಟಾಗಿತ್ತು.

ನಾಲ್ಕು ಪಂದ್ಯಗಳ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆಯಲ್ಲಿರುವ ಭಾರತವು, ಈ ಮುನ್ನಡೆ ವಿಸ್ತರಿಸುವ ಸಾಧ್ಯತೆಗಳು ದಟ್ಟವಾಗಿವೆ. ಅದ್ಭುತ ಬೌಲಿಂಗ್‌ಗೆ ದಕ್ಷಿಣ ಆಫ್ರಿಕಾ ದಾಂಡಿಗರ ಬಳಿ ಉತ್ತರವೇ ಇರಲಿಲ್ಲ. ಎಡಗೈ ಆಟಗಾರ ಜೀನ್ ಪೌಲ್ ಡುಮಿನಿ ಮಾತ್ರವೇ 65 ಎಸೆತಗಳಲ್ಲಿ 35 ರನ್ ಮಾಡಿ, ಭಾರತದ ದಾಳಿಯನ್ನು ಧೈರ್ಯವಾಗಿ ಎದುರಿಸಿದ್ದರು. ಇದರಲ್ಲಿ ಎರಡು ಸಿಕ್ಸರ್‌ಗಳು ಹಾಗೂ ಒಂದು ಬೌಂಡರಿ ಇತ್ತು.
ಇದೀಗ, ಭಾರತವು 136 ರನ್ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದು, 108 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡು ಆಟ ಮುಂದುವರಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com