ಮಕೌ: ಹಾಲಿ ಚಾಂಪಿಯನ್ ಭಾರತದ ಪಿ.ವಿ ಸಿಂಧು ಮಕೌ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮತ್ತೊಮ್ಮೆ ಚಾಂಪಿಯನ್ ಆಗಿದ್ದಾರೆ.
ಭಾನುವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ವಿಶ್ವದ 12ನೇ ರ್ಯಾಂಕಿಂಗ್‍ನ ಭಾರತದ ಪಿ.ವಿ ಸಿಂಧು 21-9, 21-23-21-14 ಗೇಮ್ ಗಳ ಅಂತರದಲ್ಲಿ ಮಿನಾತ್ಸು ಮಿತನಿ ವಿರುದ್ಧ ಜಯ ಸಾಧಿಸಿದರು.
ಕಳೆದೆರಡು ಬಾರಿ ಚಾಂಪಿಯನ್ ಆಗಿರುವ ಪಿ.ವಿ ಸಿಂಧು, ಈ ಬಾರಿಯೂ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.