ಸೆಹ್ವಾಗ್ ಸನ್ಮಾನ ವಿಳಂಬ?

ಭಾರತ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಅವರನ್ನು ಸನ್ಮಾನಿಸುವ ಸಂಬಂಧ ಇನ್ನೂ ದಿಲ್ಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ಯಾವುದೇ...
ವಿರೇಂದ್ರ ಸೆಹ್ವಾಗ್
ವಿರೇಂದ್ರ ಸೆಹ್ವಾಗ್

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಅವರನ್ನು ಸನ್ಮಾನಿಸುವ ಸಂಬಂಧ ಇನ್ನೂ ದಿಲ್ಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ಯಾವುದೇ ನಿರ್ಧಾರ ತಳೆಯದೆ ಮೌನವಾಗಿದೆ ಎಂದು ಖಾಸಗಿ ಪತ್ರಿಕೆಯೊಂದು ವರದಿ ಮಾಡಿದೆ.

ಎಡಗೈ ವೇಗಿ ಜಹೀರ್‍ಖಾನ್ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಹೇಳಿದ ಬಳಿಕ ಅವರಿಗೆ ಮುಂಬೈನಲ್ಲಿ ನಡೆದಿದ್ದ ದ.ಆಫ್ರಿಕಾಗ ವಿರುದ್ಧದ ಏಕದಿನ ಸರಣಿಯ ಕೊನೇ ಪಂದ್ಯಕ್ಕೂ ಮುಂಚೆ ಬಿಸಿಸಿಐ ಸನ್ಮಾನ ಹಮ್ಮಿಕೊಂಡಿತ್ತು. ಅದೇ ರೀತಿ ಸೆಹ್ವಾಗ್‍ಗೂ ಸನ್ಮಾನ ಹಮ್ಮಿಕೊಳ್ಳುವುದಾಗಿ ಬಿಸಿಸಿಐ ತಿಳಿಸಿತ್ತು.

ದ.ಆಫ್ರಿಕಾ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯವು ಡಿಸೆಂಬರ್ 3 ರಿಂದ ಇಲ್ಲಿನ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಶುರುವಾಗುತ್ತಿದ್ದು,  ಇದೇ ಸಂದರ್ಭದಲ್ಲಿ ವೀರೂಗೆ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದಾಗಿ ತಿಳಿಸಲಾಗಿತ್ತು. ಆದರೆ ಸದ್ಯದ ಮಾಹಿತಿ ಪ್ರಕಾರ ಸೆಹ್ವಾಗ್ ಸನ್ಮಾನಿಸುವ ಸಂಬಂದ ಡಿಡಿಸಿಎ ಅನ್ನು ಬಿಸಿಸಿಐ ಇನ್ನೂ ಸಂಪರ್ಕಿಸಿಲ್ಲ ಎನ್ನಲಾಗಿದೆ. ಇತ್ತ ಮಂಗಳವಾರದಿಂದ ಆರಂಭವಾಗುತ್ತಿರುವ ವಿದರ್ಭ ವಿರುದ್ಧದ ಪಂದ್ಯದಲ್ಲಿ ಹರ್ಯಾಣ ಪರ ಸೆಹ್ವಾಗ್ ಆಡುವುದು ಇನ್ನೂ ಕೂಡ ಖಚಿತವಾಗಿಲ್ಲ ಎಂದೂ ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com