ವರ್ಷದ ಎಂಟನೇ ಡಬ್ಲ್ಯೂಟಿಎ ಪ್ರಶಸ್ತಿಗಾಗಿ ಹೋರಾಡು ತ್ತಿರುವ ಇಂಡೋಸ್ವಿಸ್ ಜೋಡಿ, ಗುರುವಾರ ನಡೆದ ಮಹಿಳೆಯರ ಡಬಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ನಲ್ಲಿ ಜರ್ಮನ್ಜೆಕ್ ಜೋಡಿಯಾದ ಜುಲಿಯಾ ಜಾರ್ಜಸ್ ಮತ್ತು ಕರೋಲಿನಾ ಪ್ಲಿಸ್ಕೋವಾ ವಿರುದ್ಧ 76 (5), 64 ಸೆಟ್‍ಗಳ ಅಂತರದಲ್ಲಿ ಜಯ ಸಾಧಿಸಿ ಉಪಾಂತ್ಯಕ್ಕೆ ಲಗ್ಗೆ ಹಾಕಿದರು. 1 ತಾಸು, 19 ನಿಮಿಷಗಳ ಕಾಲ ನಡೆದ ಸೆಣಸಾಟದಲ್ಲಿ ಸಾನಿಯಾಹಿಂಗಿಸ್ ಮೊದಲ ಸೆಟ್‍ನಲ್ಲಿ ತೀವ್ರ ಪ್ರತಿಸ್ಪರ್ಧೆ ಎದುರಿಸಿದರೂ, ಎರಡನೇ ಸೆಟ್‍ನಲ್ಲಿ ಸುನಾಯಾಸವಾಗಿ ಜಯ ಸಾಧಿಸಿದರು.