ಧೋನಿಯನ್ನೂ ಒಬ್ಬ ಆಟಗಾರನನ್ನಾಗಿ ಪರಿಶೀಲಿಸಬೇಕು: ಅಜಿತ್ ಅಗರ್ಕರ್

ಮಹೇಂದ್ರ ಸಿಂಗ್ ಧೋನಿ ಪಾತ್ರವನ್ನು ಆಟಗಾರನಾಗಿಯೂ ಪರಿಶೀಲಿಸಬೇಕೆಂದು ಭಾರತದ ಮಾಜಿ ವೇಗದ ಬೌಲರ್ ಅಜಿತ್ ಅಗರ್ಕರ್ ಆಯ್ಕೆದಾರರಿಗೆ ಕರೆ ನೀಡಿದ್ದಾರೆ.....
ಅಜಿತ್ ಅಗರ್ಕರ್ ಮತ್ತು ಮಹೇಂದ್ರ ಸಿಂಗ್ ಧೋನಿ
ಅಜಿತ್ ಅಗರ್ಕರ್ ಮತ್ತು ಮಹೇಂದ್ರ ಸಿಂಗ್ ಧೋನಿ

ಮುಂಬಯಿ: ಮಹೇಂದ್ರ ಸಿಂಗ್ ಧೋನಿ ಪಾತ್ರವನ್ನು ಆಟಗಾರನಾಗಿಯೂ ಪರಿಶೀಲಿಸಬೇಕೆಂದು  ಭಾರತದ ಮಾಜಿ ವೇಗದ ಬೌಲರ್ ಅಜಿತ್ ಅಗರ್ಕರ್ ಆಯ್ಕೆದಾರರಿಗೆ ಕರೆ ನೀಡಿದ್ದಾರೆ. ಧೋನಿಗೆ ಹೋಲಿಕೆಯಾಗಿ ಟೆಸ್ಟ್ ನಾಯಕರಾಗಿ ವಿರಾಟ್ ಕೊಹ್ಲಿ ಅವರ ಸಾಧನೆಯನ್ನು ಗಮನಿಸುವಂತೆಯೂ ಮತ್ತು ದಕ್ಷಿಣ ಆಫ್ರಿಕಾ ಸರಣಿಯ ಬಳಿಕ ಕಿರು ಓವರುಗಳಲ್ಲಿ ಧೋನಿಯ ಪಾತ್ರವನ್ನು ಪರಿಶೀಲಿಸುವಂತೆಯೂ ಸಲಹೆ ನೀಡಿದರು.

ಭಾರತ ದಕ್ಷಿಣ ಆಫ್ರಿಕಾ ವಿರುದ್ಧ ಟಿ 20 ಸರಣಿಯನ್ನು 0-2ರಿಂದ ಸೋತಿದ್ದು, ಮೂರನೇ ಪಂದ್ಯ ಮಳೆಯಿಂದ ವಾಷ್ ಔಟ್ ಆಗಿತ್ತು. ಈ ಹಿನ್ನೆಲೆಯಲ್ಲಿ ಧೋನಿಯ ಪ್ರದರ್ಶನವನ್ನು ವಿಶ್ಲೇಷಿಸಿದ ಅವರು ಧೋನಿ ಭಾರತದ ಉತ್ತಮ ಆಟಗಾರನಾಗಿದ್ದರೂ, ತಂಡಕ್ಕೆ ಭಾರವಾಗಿ ಪರಿಣಮಿಸುವುದು ಬೇಕಾಗಿಲ್ಲ. ಅವರು ಈಗ ನೀಡುತ್ತಿರುವ ಪ್ರದರ್ಶನಕ್ಕಿಂತ ಉತ್ತಮ ಪ್ರದರ್ಶನ ನೀಡುವ ಅಗತ್ಯವಿದೆ. ಅವರು ಹಲವು ವರ್ಷಗಳಿಂದ ಉತ್ತಮ ಸಾಧನೆ ತೋರಿದ್ದಾರೆಂದರೆ, ಈಗ ವಿಫಲವಾಗುವುದು ಸರಿಯೆನಿಸುವುದಿಲ್ಲ. ಧೋನಿ ನಾಯಕರಾಗಿ ಮಾತ್ರವಲ್ಲ ಆಟಗಾರರಾಗಿ ಹೇಗೆ ಆಡುತ್ತಿದ್ದಾರೆಂದು ಆಯ್ಕೆದಾರರು ಸೂಕ್ಷ್ಮವಾಗಿ ಗಮನಿಸಬೇಕು ಎಂದು ಅಗರ್ಕರ್ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಏಕ ದಿನ ಅಂತಾರಾಷ್ಟ್ರೀಯ ಐದು ಪಂದ್ಯಗಳ ಸರಣಿಗೆ ಮುನ್ನ, ಭಾರತದ ತಂಡವು ಉಮೇಶ್ ಯಾದವ್ ಅವರ ನೈಜ ಪೇಸ್ ಬೌಲಿಂಗ್‌ನಿಂದ ಚೇತರಿಸಿಕೊಳ್ಳಲಿದೆ ಎಂದು ಹೇಳಿದರು. ಧೋನಿ ಏಕ ದಿನ ಪಂದ್ಯಗಳಲ್ಲಿ  4ನೇ ಕ್ರಮಾಂಕದಲ್ಲಿ ಆಡುವುದನ್ನು ಅಗರ್ಕರ್ ಟೀಕಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com