ವಿಶ್ವನಾಥನ್ ಆನಂದ್ ಪೇಲವ ಆರಂಭ

ಭಾರತದ ವಿಶ್ವನಾಥನ್ ಆನಂದ್, ತಮ್ಮಮೊದಲ ದಿನದಲ್ಲಿ ಆಡಿದ ಐದು ಪಂದ್ಯಗಳಲ್ಲಿ ಕೇವಲ ಎರಡರಲ್ಲಿ ಮಾತ್ರ ಜಯಗಳಿಸಿ ತಮ್ಮ ಅಭಿಮಾನಿಗಳನ್ನು ನಿರಾಸೆಗೊಳಿಸಿದರು.
ವಿಶ್ವನಾಥನ್ ಆನಂದ್
ವಿಶ್ವನಾಥನ್ ಆನಂದ್

ಬರ್ಲಿನ್ (ಜರ್ಮನಿ): ವಿಶ್ವ ರ್ಯಾಪಿಡ್ ಚೆಸ್‍ನ ಐದನೇ ಸುತ್ತಿನ ಟೂರ್ನಿಯಲ್ಲಿ ಭಾಗವಹಿಸಿರುವ ಭಾರತದ ವಿಶ್ವನಾಥನ್ ಆನಂದ್, ತಮ್ಮ ಮೊದಲ ದಿನದಲ್ಲಿ ಆಡಿದ ಐದು ಪಂದ್ಯಗಳಲ್ಲಿ ಕೇವಲ ಎರಡರಲ್ಲಿ ಮಾತ್ರ ಜಯಗಳಿಸಿ ತಮ್ಮ ಅಭಿಮಾನಿಗಳನ್ನು ನಿರಾಸೆಗೊಳಿಸಿದರು.

ಮೊದಲೆರಡು ಪಂದ್ಯಗಳಲ್ಲಿ ಕ್ರಮವಾಗಿ, ರಷ್ಯಾದ ಗ್ರ್ಯಾಂಡ್ ಮಾಸ್ಟರ್ ಕಟೇರಿನಾ ಲಾಗ್ನೊ ಹಾಗೂ ಅಮೆರಿಕದ ಅಲೆಕ್ಸಾಂಡರ್ ಒನಿಶುಕ್ ವಿರುದ್ಧ ಜಯ ಸಾಧಿಸಿದ ಆನಂದ್, 3ನೇ ಸುತ್ತಿನ ಪಂದ್ಯದಲ್ಲಿ ಯುಎಇನ ಸಲೇಂ ವಿರುದ್ಧ ಡ್ರಾ ಸಾಧಿಸಿದರು. ಆದರೆ, 4ನೇ ಹಾಗೂ 5ನೇ ಪಂದ್ಯದಲ್ಲಿ ರಷ್ಯಾದ ಡ್ಯಾನಿಲ್, ಪಾವೆಲ್ ವಿರುದ್ಧ ಸೋತರು.

ಗಮನ ಸೆಳೆದ ವಿದಿತ್: ಭಾರತದ ಮತ್ತೊಬ್ಬ ಆಟಗಾರ ವಿದಿತ್ ಸಂತೋಷ್ ಗುಜರಾತಿ, ತಮಗಿಂತಲೂ ಅಗ್ರಶ್ರೇಯಾಂಕಿತ ಆಟಗಾರರನ್ನು ಮಣಿಸಿದ್ದು ದಿನದ ವಿಶೇಷವಾಗಿತ್ತು. ಮೊದಲ ಪಂದ್ಯದಲ್ಲಿ ರಷ್ಯಾದ ಅಲೆಕ್ಸಾಂಡರ್ ಗ್ರಿಶುಕ್ ವಿರುದಟಛಿ ಗೆದ್ದ ಅವರು, 2ನೇ ಹಾಗೂ 3ನೇ ಪಂದ್ಯಗಳಲ್ಲಿ ಅಜರ್‍ಬೈಜಾನ್ ನ ಗಾಡಿರ್ ಗುಸೆನೊವ್ ಹಾಗೂ ಉಕ್ರೇನ್‍ನ ಆಂದ್ರೈ ವೊಲೊಕಿಟಿನ್ ವಿರುದ್ಧ ಜಯ ಸಾಧಿಸಿದರು. ಆನಂತರ, ರಷ್ಯಾದ ಇಯಾನ್ ನೊಪ್ಮ್ನಿಚಿ, ಹಂಗೇರಿಯದ ಪೀಟರ್ ವಿರುದ್ಧ ಡ್ರಾ ಸಾಧಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com