
ಮಸ್ಕಟ್: ಮುಂಬರಲಿರುವ 2018ರ ವಿಶ್ವಕಪ್ ಅರ್ಹತಾ ಪಂದ್ಯಾವಳಿಯ ಆರಂಭಿಕ ಸುತ್ತಿನ ಪಂದ್ಯಗಳಲ್ಲಿ ಸೋತು ತಲ್ಲಣಿಸಿರುವ ಭಾರತಕ್ಕೆ ಮಂಗಳವಾರ ಮತ್ತೊಂದು ಹಂತದ ಸವಾಲು ಎದುರಾಗಿದ್ದು ಒಮನ್ ಜತೆಗೆ ಕಾದಾಡಲಿದೆ. ಅರ್ಹತಾ ಸುತ್ತಿನ `ಡಿ' ಗುಂಪಿನಲ್ಲಿ ಸ್ಥಾನ ಪಡೆದಿರುವ ಭಾರತ, ಈಗಾಗಲೇ ನಾಲ್ಕು ಪಂದ್ಯಗಳನ್ನು ಆಡಿದ್ದು ಒಂದರಲ್ಲಿಯೂ ಗೆಲುವು ಸಾಧಿಸಿಲ್ಲ.
ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಇದೇ ಓಮನ್ ವಿರುದ್ಧ ಭಾರತ ದಿಟ್ಟ ಪೈಪೋಟಿ ನೀಡಿತ್ತಾದರೂ, 1-2 ಗೋಲುಗಳಿಂದ ಸೋಲನುಭವಿಸಿತ್ತು. ಬಳಿಕ ನಡೆದ ಗುವಾಮ್ ವಿರುದ್ಧ 2-1ರಿಂದ ಸೋತ ಭಾರತ, ಮತ್ತೆ ಬೆಂಗಳೂರಿನಲ್ಲಿ ನಡೆದ ಇರಾನ್ ವಿರುದ್ಧದ ಪಂದ್ಯದಲ್ಲಿ 0-3 ಗೋಲುಗಳಿಂದ ಜರ್ಜರಿತವಾಗಿತ್ತು. ಇದಾದ ಬಳಿಕ ತುಕ್ರ್ ಮೆನಿಸ್ತಾನ ವಿರುದ್ಧ ಭಾರತ 1-2 ಅಂತರದ ಸೋಲನುಭವಿಸಿತ್ತು. ಐಎಸ್‍ಎಲ್ ಹಿನ್ನೆಲೆಯಲ್ಲಿ ಪ್ರಮುಖ ಆಟಗಾರರ ಅಲಭ್ಯತೆಯೂ ಕಾಡಿದೆ. ಪಿಫಾ ರ್ಯಾಂಕಿಂಗ್‍ನಲ್ಲಿ 167ನೇ ಸ್ಥಾನದಲ್ಲಿರುವ ಸುನೀಲ್ ಛೆಟ್ರಿ ಪಡೆ, 102ನೇ ಶ್ರೇಯಾಂಕದಲ್ಲಿರುವ ಓಮನ್‍ಗೆ ಯಾವ ಪರಿಯಲ್ಲಿ ಪೈಪೋಟಿ ಒಡ್ಡುತ್ತದೆ ಎಂಬುದನ್ನು ಕಾದುನೋಡಬೇಕಿದೆ.
Advertisement