ಲಿಯೋನೆಲ್ ಮೆಸ್ಸಿ ವಿಶ್ವ ಕಂಡ ಶ್ರೇಷ್ಠ ಫುಟ್ಬಾಲಿಗ: ದಂತಕತೆ ಪೀಲೆ ಅಭಿಮತ

ಕಳೆದ ಹತ್ತು ವರ್ಷಗಳಲ್ಲಿ ಮೆಸ್ಸಿ ಒಬ್ಬ ಅದ್ಭುತ ಆಟಗಾರ ಎನಿಸುತ್ತದೆ. ರೊನಾಲ್ಡೊ ಸಹ ಉತ್ತಮ ಆಟಗಾರನಾಗಿದ್ದು ಗೋಲು ಗಳಿಸಲು ಅವರು ಯಾವಾಗಲೂ ಯತ್ನಿಸುತ್ತಿರುತ್ತಾರೆ. ...
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಜೊತೆ ಫುಟ್ಬಾಲ್ ದಂತಕತೆ ಪೀಲೆ
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಜೊತೆ ಫುಟ್ಬಾಲ್ ದಂತಕತೆ ಪೀಲೆ

ಕೊಲ್ಕೊತಾ: ಭಾರತದಲ್ಲಿ ಫುಟ್ಬಾಲ್ ಕ್ರೀಡೆಯ ಬೆಳವಣಿಗೆಗೆ ಇಂಡಿಯನ್ ಸೂಪರ್ ಲೀಗ್ (ಐಎಸ್‍ಎಲ್) ಟೂರ್ನಿಯು ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಜಗತ್ತಿನ ಫುಟ್ಬಾಲ್  ದಂತಕತೆ, ಬ್ರೆಜಿಲ್‍ನ ತಾರೆ ಪೀಲೆ ಅಭಿಪ್ರಾಯಪಟ್ಟಿದ್ದಾರೆ. ಆದರೆ, ಭಾರತದಲ್ಲಿ ಈ ಕ್ರೀಡೆಯ ಬೆಳವಣಿಗೆಗೆ ಪೂರಕವಾಗಿ ಎಲ್ಲಾ ಫುಟ್ಬಾಲ್ ಸಂಸ್ಥೆಗಳು ಬೇರುಮಟ್ಟದಲ್ಲಿ ಹೆಚ್ಚೆಚ್ಚು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕಿದೆ ಎಂದೂ ಸಲಹೆ
ನೀಡಿದ್ದಾರೆ.

ಮೆಸ್ಸಿ ಬಗ್ಗೆ ಶ್ಲಾಘನೆ: 38 ವರ್ಷಗಳ ನಂತರ ಭಾರತಕ್ಕೆ ಆಗಮಿಸಿರುವ ಪೀಲೆ, ಸೋಮವಾರ ಕೋಲ್ಕೋತಾದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರೊಂದಿಗೆ ತಮ್ಮ ಅಭಿಪ್ರಾಯ ಅನಿಸಿಕೆಗಳನ್ನು ಹಂಚಿಕೊಂಡರು. ಒಂದು ವಾರ ಕಾಲಾವಧಿಯ ಈ ಪ್ರವಾಸದಲ್ಲಿ ಪೀಲೆ ನಡೆಸಿದ ಮೊದಲ ಪತ್ರಿಕಾಗೋಷ್ಠಿಯಿದು. ಹಾಗೆ ಲೋಕಾರೂಢಿಯಲ್ಲಿ ಮಾತನಾಡಿದ ಅವರು ನಿಮ್ಮ ನಂತರ ಫುಟ್ಬಾಲ್ ಜಗತ್ತಿನಲ್ಲಿ ನೀವು ಕಂಡ ಅದ್ಭುತ ಆಟಗಾರ ಯಾರು'' ಎಂಬ ಪ್ರಶ್ನೆಗೆ ತುಸು ಯೋಚಿಸಿಯೇ ಉತ್ತರಿಸಿದ ಅವರು, ``ಒಂದು ತಲೆಮಾರಿನ ಕ್ರೀಡಾಳುವನ್ನು ಮತ್ತೊಂದು ತಲೆಮಾರಿನ ಕ್ರೀಡಾಳು ಜೊತೆ ಹೋಲಿಸುವುದು ಅಷ್ಟು ಸುಲಭವಲ್ಲ. ಆದರೂ ನನ್ನ ಪ್ರಕಾರ ಕಳೆದ ಹತ್ತು ವರ್ಷಗಳಲ್ಲಿ  ಮೆಸ್ಸಿ ಒಬ್ಬ ಅದ್ಭುತ ಆಟಗಾರ ಎನಿಸುತ್ತದೆ. ರೊನಾಲ್ಡೊ ಸಹ ಉತ್ತಮ ಆಟಗಾರನಾಗಿದ್ದು ಗೋಲು ಗಳಿಸಲು ಅವರು ಯಾವಾಗಲೂ ಯತ್ನಿಸುತ್ತಿರುತ್ತಾರೆ. ಆದರೆ, ಮೆಸ್ಸಿ ಗೋಲು ಗಳಿಸುವ ಶೈಲಿಯೇ ವಿಭಿನ್ನ. ಇನ್ನು, ನೇಮಾರ್ ಸಹ ಅತ್ಯುತ್ತಮ ಪಟುವೇ. ನನ್ನ ಕನಸಿನ ಫುಟ್ಬಾಲ್ ತಂಡದಲ್ಲಿ ಮೆಸ್ಸಿ, ರೊನಾಲ್ಡೋ ಹಾಗೂ ನೇಮಾರ್‍ಗೆ ಸ್ಥಾನವಿದ್ದೇ ಇರುತ್ತದೆ'' ಎಂದರು.

ಫಿಫಾ ಅಧ್ಯಕ್ಷ  ಪಟ್ಟದ ಆಕಾಂಕ್ಷಿಯಲ್ಲ
ಅಂತಾರಾಷ್ಟ್ರೀಯ ಫುಟ್ಬಾಲ್ ಸಂಸ್ಥೆ (ಫಿಫಾ) ಹಗರಣಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಲು ಪೀಲೆ ನಿರಾಕರಿಸಿದರು  ಅದರಲ್ಲೂ ಫಿಫಾಹಾಲಿ ಅಧ್ಯಕ್ಷ ಸೆಪ್ ಬ್ಲಾಟರ್ ಅವರ ವಿರುದ್ಧ ಎದ್ದಿರುವ ಆರ್ಥಿಕ ಅವ್ಯವಹಾರ ಹಾಗೂ ಅಧಿಕಾರ ದುರುಪಯೋಗದ ಆರೋಪಗಳ ಕುರಿತಾದ ಪ್ರಶ್ನೆಗಳಿಗೂ ಅವರು ಉತ್ತರಿಸಲಿಲ್ಲ. ಆದರೆ, ಫಿಫಾ ಅಧ್ಯಕ್ಷಗಿರಿಗೆ ತಾವು ಆಕಾಂಕ್ಷಿಯಲ್ಲ ಎಂಬ ವಿಚಾರವನ್ನು ಮಾತ್ರ ಅವರು ಸ್ಪಷ್ಟಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com