ಭಾರತ-ದಕ್ಷಿಣ ಆಫ್ರಿಕಾ ಪಂದ್ಯಕ್ಕೆ ಬೆದರಿಕೆ: ಕ್ರೀಡಾಂಗಣದಲ್ಲಿ ಮೊಬೈಲ್ ಇಂಟರ್ನೆಟ್ ಸ್ಥಗಿತ

ಪ್ರಬಲ ಪಟೇಲ್ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂದು ಹೋರಾಟಕ್ಕಿಳಿದಿದ್ದ ಗುಜರಾತ್ ನ ಹಾರ್ದಿಕ್ ಪಟೇಲ್ ಇದೀಗ ಹೊಸ ವಿಷಯವೊಂದಕ್ಕೆ ಕೈ ಹಾಕಿದ್ದು, ಅ.18ರಂದು ರಾಜ್ ಕೋಟ್ ನಲ್ಲಿ ನಡೆಯಲಿರುವ ಭಾರತ-ದಕ್ಷಿಣ ಆಫ್ರಿಕಾದ ಅಂತರಾಷ್ಟ್ರೀಯ ಏಕ ದಿನ ಪಂದ್ಯಕ್ಕೆ ಆಗಮಿಸುವ ಕ್ರಿಕೆಟ್ ತಂಡಗಳಿಗೆ...
ಹಾರ್ದಿಕ್ ಪಟೇಲ್ (ಸಂಗ್ರಹ ಚಿತ್ರ)
ಹಾರ್ದಿಕ್ ಪಟೇಲ್ (ಸಂಗ್ರಹ ಚಿತ್ರ)

ರಾಜ್ ಕೋಟ್: ಪ್ರಬಲ ಪಟೇಲ್ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂದು ಹೋರಾಟಕ್ಕಿಳಿದಿದ್ದ ಗುಜರಾತ್ ನ ಹಾರ್ದಿಕ್ ಪಟೇಲ್ ಇದೀಗ ಹೊಸ ವಿಷಯವೊಂದಕ್ಕೆ ಕೈ ಹಾಕಿದ್ದು, ಅ.18ರಂದು ರಾಜ್ ಕೋಟ್ ನಲ್ಲಿ ನಡೆಯಲಿರುವ ಭಾರತ-ದಕ್ಷಿಣ ಆಫ್ರಿಕಾದ ಅಂತರಾಷ್ಟ್ರೀಯ ಏಕ ದಿನ ಪಂದ್ಯಕ್ಕೆ ಆಗಮಿಸುವ ಕ್ರಿಕೆಟ್ ತಂಡಗಳಿಗೆ ತಡೆಯೊಡ್ಡುವುದಾಗಿ ಬೆದರಿಕೆಯೊಡ್ಡಿರುವ ಹಿನ್ನೆಲೆಯಲ್ಲಿ ಈಗಾಗಲೇ ಕ್ರಮ ಕೈ ಗೊಂಡಿರುವ ಭದ್ರತಾಧಿಕಾರಿಗಳು ಕ್ರೀಡಾಂಗಣದಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಿದೆ ಎಂದು ಭಾನುವಾರ ತಿಳಿದುಬಂದಿದೆ.

ಈ ಕುರಿತಂತೆ ಮಾತನಾಡಿರುವ ಜಿಲ್ಲಾಧಿಕಾರಿ ಮನಿಶಾ ಚಂದ್ರ ಅವರು, ಕ್ರಿಕೆಟ್ ಪಂದ್ಯಾವಳಿಗೆ ತಡೆಯೊಡ್ಡುವ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಈಗಾಗಲೇ ಎಚ್ಚರಿಕೆ ಕ್ರಮ ಕೈಗೊಳ್ಳಲಾಗಿದ್ದು, ಇದೀಗ ಪಂದ್ಯದ ದಿನದಂದು ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 8 ರವರೆಗೆ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.

ನಿನ್ನೆಯಷ್ಟೇ ಭಾರತ-ದಕ್ಷಿಣ ಆಫ್ರಿಕಾ ಪಂದ್ಯದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದ್ದು, ಪಂದ್ಯಾಟದ ಟಿಕೆಟ್ ಗಳನ್ನು ಈಗಾಗಲೇ ಬಿಜೆಪಿ ಕಾರ್ಯಕರ್ತರಿಗೆ ಮಾರಲಾಗಿದೆ. ಪಟೇಲ್ ಸಮುದಾಯದ ಸದಸ್ಯರಿಗೆ ಕ್ರಿಕೆಟ್ ವೀಕ್ಷಣೆಗೆ ಟಿಕೆಟ್ ನೀಡಿಲ್ಲ ಎಂದು ಹಾರ್ದಿಕ್ ಪಟೇಲ ಆರೋಪಿಸಿದ್ದರು. ಅಲ್ಲದೆ, ಇನ್ನು ಕೆಲವೇ ದಿನಗಳಲ್ಲಿ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ನಡೆಯುವ ಪಂದ್ಯಾವಳಿಗೆ ಪಟೇಲ್ ಸಮುದಾಯ ತಡೆ ಬೇಲಿ ನಿರ್ಮಿಸಲಿದ್ದು, ಎರಡೂ ತಂಡಗಳನ್ನು ಮಾರ್ಗದ ನಡುವೆಯೇ ತಡೆಯಲಾಗುತ್ತದೆ ಎಂದು ಬೆದರಿಕೆಯೊಡ್ಡಿದ್ದರು.

ಹಾರ್ದಿಕ್ ಪಟೇಲ್ ಬೆದರಿಕೆಯ ಹಿನ್ನೆಲೆಯಲ್ಲಿ, ಪೊಲೀಸರು ಸ್ಟೇಡಿಯಂ ಸುತ್ತಲೂ ಬಿಗಿ ಭದ್ರತೆ ನಿಯೋಜಿಸಿದ್ದು, ನಗರದಲ್ಲಿ ವ್ಯಾಪಕ ಬಿಗಿ ಭದ್ರತೆ ಏರ್ಪಡಿಸಿದ್ದಾರೆ. ಇದೀಗ ಕ್ರಿಕೆಟ್ ಪಂದ್ಯಾಟ ಸುಸೂತ್ರವಾಗಿ ನಡೆಯಲು ಭದ್ರತಾ ಸಿಬ್ಬಂದಿಗಳು ಸಂಪೂರ್ಣ ವ್ಯವಸ್ಥೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸ್ಥಳದಲ್ಲಿ ಪೊಲೀಸರು ಮಾನವ ರಹಿತ ಹವಾ ವಾಹನಗಳು (ಯುಎವಿಗಳು) ಮತ್ತು 90 ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com