ನವದೆಹಲಿ: ಡಿಸೆಂಬರ್ ನಲ್ಲಿ ನಡೆಯಬೇಕಿದ್ದ ಭಾರತದ ಜತೆಗಿನ ಕ್ರಿಕೆಟ್ ಸರಣಿ ಸಾಕಾರಗೊಳ್ಳುವ ಸಾಧ್ಯತೆಗಳು ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿಯಾಗಲು ಪ್ರಯತ್ನಿಸುತ್ತಿದ್ದೇನೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಶಹರ್ಯಾರ್ ಖಾನ್ ಹೇಳಿದ್ದಾರೆ.
ಪಿಸಿಬಿ ಕಾರ್ಯಕಾರಿ ಸಮಿತಿ ಮುಖ್ಯಸ್ಥ ನಜಮ್ ಸೇಥಿ ಅವರು ದುಬೈಗೆ ತೆರಳಿದ್ದಾರೆ. ನಾನು ಅರುಣ್ ಜೇಟ್ಲಿ ಅವರನ್ನು ಭೇಟಿಯಾಗಿ ಚರ್ಚಿಸಲು ಪ್ರಯತ್ನಿಸುತ್ತಿದ್ದೇನೆ. ಭೇಟಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಖಾನ್ ಹೇಳಿದ್ದಾರೆ.
ಭಾರತದ ಜತೆಗಿನ ಕ್ರಿಕೆಟ್ ಸರಣಿಯ ಸಾಧ್ಯತೆಗಳ ಬಗೆಗಿನ ಪ್ರಶ್ನೆಗೆ ಏನಾದರೂ ಮಾತುಕತೆ ನಡೆದ ಬಳಿಕವಷ್ಟೇ ನಾನು ಹೇಳಬಲ್ಲೇ ಎಂದಿದ್ದಾರೆ. ಮತ್ತೊಂದೆಡೆ, ಯಾವುದೇ ಅಧಿಕೃತ ಅಥವಾ ಅನಧಿಕೃತ ಮಾತುಕತೆ ನಡೆದಲ್ಲಿ ಇಂದು ಸಂಜೆಯೇ ನಡೆಯಲಿವೆ.