ನಿವೃತ್ತಿ ವದಂತಿ ತಳ್ಳಿಹಾಕಿದ ವೀರೇಂದ್ರ ಸೆಹ್ವಾಗ್

ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ತಾವು ನಿವೃತ್ತಿ ವದಂತಿಗಳನ್ನು ಸುಳ್ಳೆಂದು ಹೇಳಿರುವ ಹಿರಿಯ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ನಿವತ್ತಿಯ ಬಗ್ಗೆ ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ....
ವಿರೇಂದ್ರ ಸೆಹ್ವಾಗ್
ವಿರೇಂದ್ರ ಸೆಹ್ವಾಗ್

ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ತಾವು ನಿವೃತ್ತಿ ಹೇಳಿರುವುದಾಗಿ ಶನಿವಾರ ಹಬ್ಬಿದ್ದ ವದಂತಿಗಳನ್ನು ಸುಳ್ಳೆಂದು  ಹೇಳಿರುವ ಹಿರಿಯ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ನಿವತ್ತಿಯ ಬಗ್ಗೆ ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಆದರೆ, ಮುಂದಿನ ವರ್ಷ ನಡೆಯಲಿರುವ ಮಾಸ್ಟರ್ಸ್ ಚಾಂಪಿಯನ್ಸ್ ಲೀಗ್‍ನಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದಾರೆ. ಮಾಸ್ಟರ್ಸ್ ಚಾಂಪಿಯನ್ಸ್ ಲೀಗ್‍ನಲ್ಲಿ ಕೇವಲ ನಿವೃತ್ತ ಕ್ರಿಕೆಟಿಗರಷ್ಟೇ ಪಾಲ್ಗೊಳ್ಳಲಿರುವ ಹಿನ್ನೆಲೆಯಲ್ಲಿ, ಸೆಹ್ವಾಗ್ ಅವರು ಶೀಘ್ರವೇ ನಿವೃತ್ತಿ ಘೋಷಿಸುತ್ತಾರೆಂಬ ಪರೋಕ್ಷವಾಗಿ  ಸೂಚನೆ ಸಿಕ್ಕಿದೆ.  ಸದ್ಯಕ್ಕೆ ರಣಜಿ ಟೂರ್ನಿಯಲ್ಲಿ ಹರ್ಯಾಣ ತಂಡದಲ್ಲಿ ಆಡುತ್ತಿರುವ ಅವರು, ಟೂರ್ನಿ ಮುಂದಿದ ನಂತರ ನಿವೃತ್ತಿ ಷೋಷಿಸಬಹುದು ಎನ್ನಲಾಗಿದೆ.

ಕಿಚ್ಚು ಹಚ್ಚಿದ ಸುದ್ದಿ: ಭಾರತೀಯ ಕ್ರಿಕೆಟ್ ಕಂಡ ಸ್ಫೋಟಕ ಬ್ಯಾಟ್ಸ್‍ಮನ್ ವೀರೇಂದ್ರ ಸೆಹ್ವಾಗ್ ನಿವೃತ್ತಿ ಘೋಷಿಸಿ ದ್ದಾರೆಂಬ ಸುದ್ದಿ ಅಂತರ್ಜಾಲ ಮಾಧ್ಯಮಗಳಲ್ಲಿ ಭಾರಿ ಸಂಚಲನ
ಉಂಟು ಮಾಡಿತು. ಹಲವಾರು ಪ್ರಮುಖ ಸುದ್ದಿ ವಾಹಿನಿಗಳ ಜಾಲ ತಾಣಗಳು ಇದನ್ನು ದೊಡ್ಡಮಟ್ಟದಲ್ಲಿ ಬಿತ್ತರಿಸಿದವಲ್ಲದೇ ಸೆಹ್ವಾಗ್ ಅವರ ಹಿಂದಿನ ಸಾಧನೆಗಳ ಗುಣಗಾನ ಮಾಡಿದವು.

ಸ್ಪಷ್ಟೀಕರಣ: ಕೆಲವೇ ನಿಮಿಷಗಳಲ್ಲಿ ಅದು ಸುಳ್ಳೆಂಬ ಸುದ್ದಿ ಹೊರಬಿತ್ತು. ಯಾವ ಜಾಲತಾಣಗಳು ಸೆಹ್ವಾಗ್ ನಿವೃತ್ತಿಯ ಸುದ್ದಿಯನ್ನು ನೀಡಿದ್ದವೋ ಅದೇ ತಾಣಗಳು
`ವಿದಾಯದ ವದಂತಿ ಅಧಿಕೃತವಲ್ಲ: ವೀರೂ ' ಎಂಬ ಶೀರ್ಷಿಕೆಯಡಿ ಸ್ಪಷ್ಟೀಕರಣದ ಸುದ್ದಿಯನ್ನು ನೀಡಿದವು. ಆದರೂ ಮುಂದಿನ ವರ್ಷ ನಡೆಯಲಿರುವ ಮಾಸ್ಟರ್ಸ್  ಚಾಂಪಿಯನ್ಸ್ ಲೀಗ್ ನಲ್ಲಿ ಆಡುವ ಇಂಗಿತ ವ್ಯಕ್ತಪಡಿಸುವುದರೊಂದಿಗೆ ಸೆಹ್ವಾಗ್ ಅಂಚಿನಲ್ಲಿರುವುದಂತೂ ಸ್ಪಷ್ಟವಾಗಿದೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com