ಸೆಹ್ವಾಗ್‌ನ ತಮಾಷೆಗಳನ್ನು ಹೇಗೆ ಮರೆಯಲು ಸಾಧ್ಯ ? ನಾಟ್‌ವೆಸ್ಟ್ ಟ್ರೋಫಿ ಫೈನಲ್ ಪಂದ್ಯವಾಗಿತ್ತು ಅದು. ನಮ್ಮ ಮುಂದೆ ಇಂಗ್ಲೆಂಡ್ 325 ರನ್‌ಗಳ ಗುರಿಯಿರಿಸಿತ್ತು. ಅಷ್ಟೊಂದು ಸ್ಕೋರ್ ಮಾಡುವುದು ನಮ್ಮಿಂದ ಸಾಧ್ಯವೇ ಎಂಬ ಒತ್ತಡದಲ್ಲಿ ನಾನಿದ್ದೆ. ಆರಂಭಿಕ ದಾಂಡಿಗರಾಗಿ ನಾವು ಕ್ರೀಸಿಗಿಳಿದಾಗ ನಾನು ತುಂಬಾ ವ್ಯಾಕುಲನಾಗಿದ್ದೆ. ಆದರೆ ಸೆಹ್ವಾಗ್ ಸೀಟಿ ಹೊಡೆಯುತ್ತಾ ನನ್ನೊಂದಿಗೆ ಹೆಜ್ಜೆ ಹಾಕುತ್ತಿದ್ದರು. ಸ್ಕೋರ್ ಜಾಸ್ತಿ ಇದೆ, ಆಟದತ್ತ ಗಮನ ಹರಿಸು ಎಂದು ನಾನು ಸೆಹ್ವಾಗ್‌ಗೆ ಹೇಳಿದರೆ, ಕ್ಯಾಪ್ಟನ್..ಈ ಮ್ಯಾಚ್ ನಾವೇ ಗೆಲ್ಲುತ್ತೇವೆ ಎಂದು ಉತ್ತರಿಸಿದ್ದರು ಎಂದು ಸೆಹ್ವಾಗ್ ಜತೆಗಿನ ನೆನಪುಗಳನ್ನು ಗಂಗೂಲಿ ಬಿಚ್ಚಿಟ್ಟಿದ್ದಾರೆ.