ಚೆನ್ನೈಯಿನ್ ತಂಡದ ವಿಜಯೋತ್ಸವ

ಪಂದ್ಯದ ಬಹುತೇಕ ಅವಧಿಯಲ್ಲಿ ನಿಯಂತ್ರಣ ಸಾಧಿಸಿದ್ದ ಆತಿಥೇಯ ಚೆನ್ನೈಯಿನ್ ಎಫ್ ಸಿ ಎರಡನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಮತ್ತೊಂದು ಜಯ ದಾಖಲಿಸಿದೆ.
ಚೆನ್ನೈಯಿನ್ ಎಫ್ ಸಿ
ಚೆನ್ನೈಯಿನ್ ಎಫ್ ಸಿ
Updated on

ಚೆನ್ನೈ: ಪಂದ್ಯದ ಬಹುತೇಕ ಅವಧಿಯಲ್ಲಿ ನಿಯಂತ್ರಣ ಸಾಧಿಸಿದ್ದ ಆತಿಥೇಯ ಚೆನ್ನೈಯಿನ್ ಎಫ್ ಸಿ ಎರಡನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಮತ್ತೊಂದು ಜಯ ದಾಖಲಿಸಿದೆ.
ಶನಿವಾರ ಜವಾಹರ್ ಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಚೆನ್ನಯಿನ್ ಎಫ್.ಸಿ 2 -1 ಗೋಲುಗಳ ಅಂತರದಲ್ಲಿ ಪುಣೆ ಸಿಟಿ ಎಫ್ ಸಿ ವಿರುದ್ಧ ಭರ್ಜರಿ ಜಯ ಸಾಧಿಸಿತು. ಆ ಮೂಲಕ ಚೆನ್ನೈಯಿನ್ ಎಫ್.ಸಿ ಪ್ರಸಕ್ತ ಟೂರ್ನಿಯಲ್ಲಿ 9 ಅಂಕಗಳನ್ನು ಬಾಚಿಕೊಳ್ಳುವ ಮೂಲಕ ಅಂಕಪಟ್ಟಿಯಲ್ಲಿ 2 ನೇ ಸ್ಥಾನದಲ್ಲಿದೆ. ಇನ್ನು ಪುಣೆ ಸಿಟಿ ಎಫ್ ಸಿ ಎರಡನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಕುಸಿತ ಕಂಡಿದೆ.
ಚೆನ್ನೈಯಿನ್ ಎಫ್.ಸಿ ತಂಡದ ಪರ ಬೆರ್ನಾಡ್ ಮೆಂಡಿ ಪಂದ್ಯದ 34 ನೇ ಹಾಗೂ ಜಾನ್ ಸ್ಟೀವನ್ ಮೆಂಡೋಜಾ 48 ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಇನ್ನು ಪುಣೆ ಸಿಟಿ ಎಫ್.ಸಿ ವಿರುದ್ಧ ಕಾಲು ಉಚೆ 75 ನೇ ನಿಮಿಷದಲ್ಲಿ ಗೋಲು ದಾಖಲಿಸಿ ತಂಡದ ಸೋಲಿನ ಅಂತರ ಕಡಿಮೆ ಮಾಡಿದರು.
ಕಳೆದ ಪಂದ್ಯದಲ್ಲಿ ನಾರ್ಥ್ ಈಸ್ಟ್ ಯುನೈಟೆಡ್ ಎಫ್.ಸಿ ವಿರುದ್ಧ ಸೋಲನುಭಾವಿಸಿದ್ದ ಚೆನ್ನೈಯಿನ್ ಎಫ್.ಸಿ ಪಂದ್ಯದಲ್ಲಿ ಮತ್ತೆ ಗೆಲುವಿನ ಹಾದಿಗೆ ಮರಳಿರುವುದು ಆಟಗಾರರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com