ಪಾರಾಯಿತು. ಇಲ್ಲಿನ ಗಂಗೋತ್ರಿ ಗ್ಲೇಡ್ಸ್ ಮೈದಾನದಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿದ್ದ `ಎ' ಗುಂಪಿನ ಪಂದ್ಯವು ಡ್ರಾನಲ್ಲಿ ಮುಕ್ತಾಯ ಕಂಡಿತು. ಅಲ್ಲಿಗೆ ಕರ್ನಾಟಕ ಸತತ ನಾಲ್ಕು ಪಂದ್ಯಗಳಲ್ಲಿ ಡ್ರಾ ಸಾಧಿಸಿದಂತಾಗಿದ್ದು, ಅದರ ಮುಂದಿನ ಹಾದಿ ಇನ್ನಷ್ಟು ಸವಾಲಿನಿಂದ ಕೂಡಿರಲಿದೆ. ಏಕೆಂದರೆ, ಹರ್ಯಾಣ ಪಂದ್ಯ ಕ್ಯೂ ಮುನ್ನ ಅಂಕಪಟ್ಟಿಯಲ್ಲಿ ಕೇವಲ 7 ಅಂಕಗಳಿಂದ ಐದನೇ ಸ್ಥಾನದಲ್ಲಿದ್ದ ಅದು, ಈಗ 8 ಅಂಕಗಳೊಂದಿಗೆ ಅದೇ ಸ್ಥಾನದಲ್ಲಿ ಮುಂದುವರಿದಿದೆ. ಒಟ್ಟು 15 ಪಾಯಿಂಟ್ಸ್ ಗಳಿಸಿರುವ ದೆಹಲಿ ಮೊದಲಸ್ಥಾನದಲ್ಲಿದ್ದರೆ, ಅಸ್ಸಾಂ, ವಿದರ್ಭ ತಲಾ 10 ಮತ್ತು ಮಹಾರಾಷ್ಟ್ರ 9 ಅಂಕ ಗಳಿಸಿ ಕ್ರಮವಾಗಿ 2,3 ಹಾಗೂ 4 ನೇ ಸ್ಥಾನದಲ್ಲಿವೆ.ಉತ್ತಪ್ಪ ಸಹನೆಯ ಆಟಗೆಲ್ಲಲು 373 ರನ್‍ಗಳಂಥ ಸವಾಲಿನಗುರಿ ಪಡೆದಿದ್ದ ಕರ್ನಾಟಕ ಪಂದ್ಯದ ಮೂರನೇ ದಿನದಾಟದಂದು ವಿಕೆಟ್ ಕಳೆದುಕೊಳ್ಳದೆ 27 ರನ್ ಮಾಡಿತ್ತು.ಅದರಂತೆ ಕೊನೆಯ ದಿನದಂದು ಬಿರುಸಿನ ಆಟವಾಡಿ ಗೆಲುವು ಸಾಧಿಸುವ ಕನಸು ಹೊತ್ತಿದ್ದ ವಿನಯ್ ಪಡೆಗೆ ಪಿಚ್ ಸಹಕರಿಸಲಿಲ್ಲ. ಆದರೂ, ಉತ್ತಪ್ಪ, ಮತ್ತಿತರರು ಸೆಹ್ವಾಗ್ ಪಡೆಯ ಜಯದಾಸೆಗೆ ತಣ್ಣೀರೆರಚಿದರು.