ಇಂಡಿಯನ್ ಸೂಪರ್ ಲೀಗ್: ಜಯದ ಗೋಲು ತಂದಿತ್ತ ಟಂಕೇ ಸಾನ್ಲಿ

ಮಂಗಳವಾರ ನಡೆದ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ಎಫ್ ಸಿ ತಂಡವನ್ನು 3-2 ಗೋಲುಗಳ ಅಂತರದಲ್ಲಿ ಸೋಲಿಸಿತು.,,
ಟಂಕೇ ಸಾನ್ಲಿ
ಟಂಕೇ ಸಾನ್ಲಿ

ಪುಣೆ: ಅಂತಿಮ ಹಂತದಲ್ಲಿ ಫಾರ್ವರ್ಡ್ ಆಟಗಾರ ಟಂಕೇ ಸಾನ್ಲಿ ಗಳಿಸಿದ ನಿರ್ಣಾಯಕ ಗೋಲಿನ ಸಹಾಯದಿಂದ ಆತಿಥೇಯ ಪುಣೆ ತಂಡ, ಮಂಗಳವಾರ ನಡೆದ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ಎಫ್ ಸಿ ತಂಡವನ್ನು 3-2 ಗೋಲುಗಳ ಅಂತರದಲ್ಲಿ ಸೋಲಿಸಿತು.

ಇವರ ಆಟದ ಮುಂದೆ ಕಾಸರಗೋಡಿನ ಆಟಗಾರ ಮೊಹಮ್ಮದ್ ರಫಿ ಗಳಿಸಿದ ಎರಡು ಗೋಲುಗಳ ಹೊರತಾಗಿಯೂ ಕೇರಳ ತಂಡ ಪಂದ್ಯದಲ್ಲಿ ಗೆಲುವು ಸಾಧಿಸಲಾಗಲಿಲ್ಲ. ಈ ಪಂದ್ಯದಲ್ಲಿನ ಗೆಲುವಿನಿಂದಾಗಿ ಪುಣೆ ಎಫ್ ಸಿ ತಂಡ, 6 ಪಂದ್ಯಗಳಿಂದ 12 ಅಂಕ ಗಳಿಸಿ ಟೂರ್ನಿಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ಆದರೆ, ಕೇರಳ ಮಾತ್ರ ಈವರೆಗೆ ಆಡಿರುವ 6 ಪಂದ್ಯಗಳಿಂದ 4 ಅಂಕ ಗಳಿಸಿ, ಕೊನೆಯ ಸ್ಥಾನದಲ್ಲಿದೆ.

ಇನ್ನು ಇಲ್ಲಿನ ಶ್ರೀ ಶಿವ ಛತ್ರಪತಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಇತ್ತಂಡಗಳ ಉತ್ತಮ ಪೈಪೋಟಿಯ ಆರಂಭದ ನಡುವೆಯೂ ಮೊದಲು ಗೋಲು ದಾಖಲಿಸಿದ್ದು ಪ್ರವಾಸಿಗರೇ. ಮೊದಲ ನಿಮಿಷದಲ್ಲೇ ಫಾರ್ವರ್ಡ್ ಆಟಗಾರ ಮೊಹಮ್ಮದ್ ರಪಿs ಗಳಿಸಿದ ಗೋಲು ಕೇರಳ ತಂಡಕ್ಕೆ ಸಂಭ್ರಮ ತಂದಿತಲ್ಲದೆ, ಪುಣೆ ವಿರುದ್ಧ 1-0 ಅಂತರದ ಮುನ್ನಡೆ ಸಾಧಿಸಲು ನೆರವಾಯಿತು. ಇದಾದ ಮೇಲೆ, ಪುಣೆ ತಂಡದ ಎರಡು ಗೋಲುಗಳ ಯತ್ನಗಳು ವಿಫಲವಾದವು. 14ನೇ ನಿಮಿಷದಲ್ಲಿ ಉಚೆ ದಾಖಲಿಸಲು ಯತ್ನಿಸಿದ ಗೋಲಿನ ಯತ್ನವನ್ನು, ಅದ್ಭುತವಾಗಿ ಡೈವ್ ಹೊಡೆಯುವಮೂಲಕ ತಡೆದ ಕೇರಳ ಬ್ಲಾಸ್ಟರ್ಸ ತಂಡದ ಗೋಲ್ ಕೀಪರ್ ಸ್ಟೀಫನ್ ಬೈವಾಟರ್ ತಂಡದ ನೆರವಿಗೆ ಧಾವಿಸಿದರು.

ಆದರೆ, 16ನೇ ನಿಮಿಷದಲ್ಲಿ ಯಶಸ್ವಿಯಾದ ಉಚೆ, ತಮ್ಮ ತಂಡಕ್ಕೆ ಮೊದಲ ಗೋಲಿನ ಸಂಭ್ರಮ ತಂದಿತ್ತರು. ಇದರಿಂದಾಗಿ, ಆತಿಥೇಯ ಪುಣೆ 1-1 ಸಮಬಲ ಸಾಧಿಸಿತು. ಇದಾದ ಮೇಲೆ, ಪಂದ್ಯದಲ್ಲಿ ಪುಣೆ ತಂಡದ್ದೇ ಮೇಲುಗೈ ಆಯಿತು. 23ನೇ ನಿಮಿಷದಲ್ಲಿ ಉಚೆ ಮತ್ತೊಂದು ಗೋಲು ಗಳಿಸಿದರು.

ಕೇರಳ ತಂಡದ ರಕ್ಷಣಾ ವಿಭಾಗವನ್ನು ಯಶಸ್ವಿಯಾಗಿ ಬೇಧಿಸಿಕೊಂಡು ಸಾಗಿದ ಪುಣೆ ತಂಡದ, ಇಂಗ್ಲೆಂಡ್ ಆಟಗಾರ ನಿಕೋಲಸ್ ರಾಬರ್ಟ್ ಶೋರೆ ಮೂಲಕ ಚೆಂಡನ್ನು ತಮ್ಮ ಸುಪರ್ದಿಗೆ ಪಡೆದ ಉಚೆ, ಕೇರಳ ತಂಡದ ಆಂಗ್ಲ ಡಿಫೆಂಡರ್ ಪೀಟರ್ ಇಯಾನ್ ರೋಮೆಜ್ ಅವರ ಕಣ್ಣುತಪ್ಪಿಸಿ ಗೋಲು ಪೆಟ್ಟಿಗೆಯಲ್ಲಿ ಚೆಂಡನ್ನು ನುಗ್ಗಿಸುವಲ್ಲಿ ಯಶಸ್ವಿಯಾದರು. ಆನಂತರ, ಪಂದ್ಯದ 30ನೇ ನಿಮಿಷದಲ್ಲಿ ಕೇರಳ ತಂಡ, ಪುನಃ ಪುಣೆಯ ವಿರುದ್ಧ ಸಡ್ಡು ಹೊಡೆಯಿತು. ಪಂದ್ಯದ ಮೊದಲ ನಿಮಿಷದಲ್ಲೇ ಗೋಲು ದಾಖಲಿಸಿದ್ದ ಮೊಹಮ್ಮದ್ ರಫೀ ಮತ್ತೊಂದು ಗೋಲು ಗಳಿಸುವ ಮೂಲಕ ಮತ್ತೆ ಅಂತರವನ್ನು 2-2ರ ಸಮಗೊಳಿಸಿದರು. ಪಂದ್ಯದ ಮೊದಲಾರ್ಧ ಇದೇ ಸಮಬಲದಲ್ಲಿ ಮುಕ್ತಾಯವಾಯಿತು. ಇನ್ನು ದ್ವಿತೀಯಾರ್ಧ ಶುರುವಾದ ಮೇಲೆ, ಕೇರಳ ತಂಡಕ್ಕೆ ಎರಡು ಗೋಲುಗಳನ್ನು ಗಳಿಸುವ ಅವಕಾಶಗಳಿದ್ದರೂ ಅದು ಸಾಧ್ಯವಾಗಲಿಲ್ಲ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com