
ಬಿಲ್ಬಾವೊ: ಹಾಲಿ ಚಾಂಪಿಯನ್ ಭಾರತದ ವಿಶ್ವನಾಥನ್ ಆನಂದ್ ಬಿಲ್ಬಾವೊ ಮಾಸ್ಟರ್ಸ್ ಫೈನಲ್ ಚೆಸ್ ಪಂದ್ಯಾವಳಿಯನ್ನು ಡ್ರಾದೊಂದಿಗೆ ಆರಂಭಿಸಿದ್ದಾರೆ. ಮೊದಲ ಸುತ್ತಿನಲ್ಲಿ ಅವರು ಹಾಲೆಂಡ್‍ನ ಅನೀಶ್ ಗಿರಿ ವಿರುದ್ಧ ಡ್ರಾ ಸಾಧಿಸಿದರು.
ಪ್ರತಿಸ್ಪರ್ಧಿಗೆ ಹೋಲಿಸಿದರೆ ಕಾಯಿ ನಡೆಸುವಲ್ಲಿ ಸಾಕಷ್ಟು ನೈಪುಣ್ಯತೆ ತೋರಿದ ಆನಂದ್, ಒಂದು ಹಂತದಲ್ಲಿ ಗಿರಿಗೆ ಆತಂಕ ತರಿಸಿದರು.
ಆದಾಗ್ಯೂ ಹಿರಿಯ ಹಾಗೂ ಪ್ರಬುದ್ಧ ಆಟಗಾರನ ಎದುರು ಸೋಲು ತಪ್ಪಿಸಿಕೊಳ್ಳುವಲ್ಲಿ ಹಾಲೆಂಡ್ ಚದರುಂಗ ಆಟಗಾರ ಯಶಸ್ವಿಯಾದರು. ಅಂತಿಮವಾಗಿ ಪಂದ್ಯದ 39ನೇ ನಡೆಯಲ್ಲಿ ಈರ್ವರೂ ಅಂಕವನ್ನು ಹಂಚಿಕೊಳ್ಳಲು ಒಡಂಬಟ್ಟರು. ಇನ್ನುಳಿದಂತೆ ನಾಲ್ವರು ಆಟಗಾರರ ಈ ಪಂದ್ಯಾವಳಿಯಲ್ಲಿ ಅಮೆರಿಕದ ವೆಸ್ಲಿ ಸೊ ಚೀನಾದ ಲಿರೆನ್ ಡಿಂಗ್ ವಿರುದ್ಧ ಗೆಲುವು ಸಾಧಿಸಿದರು.
Advertisement