ಸಾಯ್ ಹಾಕಿ ಐತಿಹಾಸಿಕ ಒಪ್ಪಂದ

ದೇಶದಲ್ಲಿ ಹಾಕಿ ಕ್ರೀಡೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಹಾಕಿ ಇಂಡಿಯಾ ಬುಧವಾರ ಭಾರತೀಯ ಕ್ರೀಡಾ ಪ್ರಾಧಿಕಾರದೊಂದಿಗೆ ಮೂರು ವರ್ಷಗಳ ಕಾಲ ಐತಿಹಾಸಿಕ ಒಪ್ಪಂದ ಮಾಡಿಕೊಂಡಿದೆ.
ಹಾಕಿ ಕ್ರೀಡೆ(ಸಾಂಕೇತಿಕ ಚಿತ್ರ)
ಹಾಕಿ ಕ್ರೀಡೆ(ಸಾಂಕೇತಿಕ ಚಿತ್ರ)

ನವದೆಹಲಿ: ದೇಶದಲ್ಲಿ ಹಾಕಿ ಕ್ರೀಡೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಹಾಕಿ ಇಂಡಿಯಾ ಬುಧವಾರ ಭಾರತೀಯ ಕ್ರೀಡಾ ಪ್ರಾಧಿಕಾರದೊಂದಿಗೆ ಮೂರು ವರ್ಷಗಳ ಕಾಲ ಐತಿಹಾಸಿಕ ಒಪ್ಪಂದ ಮಾಡಿಕೊಂಡಿದೆ.
ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಹಾಕಿಯ ಬೆಳವಣಿಗೆಯೊಂದಿಗೆ ಯುವ ಪೀಳಿಗೆಯ ಅಭಿವೃದ್ಧಿ ಮತ್ತು ಕ್ರೀಡಾ ಕ್ಷೇತ್ರದ ಬೆಳವಣಿಗೆಯ ಜತೆಗೆ ಹಾಗೂ ಹಾಕಿಯ ತರಬೇತಿ ವ್ಯವಸ್ಥೆಯನ್ನು ಹೆಚ್ಚಿಸುವುದು ಈ ಒಪ್ಪಂದದ ಪ್ರಮುಖ ಗುರಿಯಾಗಿದೆ.
ಹಾಕಿ ಇಂಡಿಯಾಗೆ ಇದೊಂದು ಹೆಮ್ಮೆಯ ಹಾಗೂ ಮರೆಯಲಾಗದ ದಿನವಾಗಿದೆ. ಭಾರತೀಯ ಕ್ರೀಡಾ ಪ್ರಾಧಿಕಾರವು ಯಾವಾಗಲೂ ನಮ್ಮ ಬೆಂಬಲಕ್ಕೆ ನಿಂತಿದೆ. ಈ ಒಪ್ಪಂದ ಭಾರತದಲ್ಲಿ ಹೊಸ ಹಾಕಿ ತಲೆಮಾರಿಗೆ ಮುನ್ನುಡಿಯಾಗಲಿದೆ. ಎಲ್ಲಕ್ಕಿಂತ ಮಿಗಿಲಾಗಿ ಯುವ ಹಾಗೂ ಪ್ರತಿಭಾನ್ವಿತ ಆಟಗಾರರು ಬೆಳಕಿಗೆ ಬರಲು ಇದು ನೆರವಾಗಲಿದೆ ಎಂದು ಹಾಕಿ ಇಂಡಿಯಾ ಅಧ್ಯಕ್ಷ ನರೇಂದ್ರ ಬಾತ್ರಾ ತಿಳಿಸಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com