ಐಎಸ್ಎಲ್: ತವರಿನಲ್ಲಿ ಮುಂಬೈ ಎಫ್ ಸಿ ಗೆ ಸತತ ನಾಲ್ಕನೇ ಜಯ

ಭಾರತದ ಖ್ಯಾತ ಫುಟ್ಬಾಲಿಗ ಸುನಿಲ್ ಛೆಟ್ರಿ ಅವರ ಹ್ಯಾಟ್ರಿಕ್ ಗೋಳಿನ ನೆರವಿನಿಂದ ಮುಂಬೈ ಸಿಟಿ ಎಫ್ ಸಿ ಎರಡನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ ಫುಟ್ ಬಾಲ್ ಟೂರ್ನಿಯಲ್ಲಿ ಭರ್ಜರಿ ಜಯ ಸಾಧಿಸಿತು.
ಮುಂಬೈ ಸಿಟಿ ಎಫ್ ಸಿ
ಮುಂಬೈ ಸಿಟಿ ಎಫ್ ಸಿ

ಮುಂಬೈ: ಭಾರತದ ಖ್ಯಾತ ಫುಟ್ಬಾಲಿಗ ಸುನಿಲ್ ಛೆಟ್ರಿ ಅವರ ಹ್ಯಾಟ್ರಿಕ್ ಗೋಳಿನ ನೆರವಿನಿಂದ ಮುಂಬೈ ಸಿಟಿ ಎಫ್ ಸಿ ಎರಡನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ ಫುಟ್ ಬಾಲ್ ಟೂರ್ನಿಯಲ್ಲಿ ಭರ್ಜರಿ ಜಯ ಸಾಧಿಸಿತು.
ಡಿ.ವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಸಿಟಿ ಎಫ್.ಸಿ 5 -1 ಗೋಲುಗಳ ಅಂತರದಲ್ಲಿ ನಾರ್ಥ್ ಈಸ್ಟ್ ಯುನೈಟೆಡ್ ಎಫ್.ಸಿ ವಿರುದ್ಧ ಜಯ ಸಾಧಿಸಿತು. ಸುನಿಲ್ ಛೆಟ್ರಿ(25 ,40 ಮತ್ತು 48 ನೇ), ನೋರ್ಡೆ(51 ನೇ) ಮತ್ತು ಫ್ರಾನ್ಸ್ ಬರ್ಟಿನ್(87 ) ಮುಂಬೈ ಪರ ಗೋಲು ದಾಖಲಿಸಿದರೆ, ನಾರ್ಥ್ ಈಸ್ಟ್ ಪರ ಬೈಥಾಂಗ್(29 ನೇ) ಏಕೈಕ ಗೋಲು ದಾಖಲಿಸಿದರು.
ಹ್ಯಾಟ್ರಿಕ್ ಗೋಲು ದಾಖಲಿಸಿದ ಸುನಿಲ್ ಛೆಟ್ರಿ ಐಎಸ್ಎಲ್ ನಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ ಎನಿಸಿದರು. ಟೂರ್ನಿಯ ಆರಂಭಿಕ ಮೂರು ಪಂದ್ಯಗಳ ಪೈಕಿ ಎರಡರಲ್ಲಿ ಸೋಲನುಭವಿಸಿ ಒಂದು ಪಂದ್ಯದಲ್ಲಿ ಡ್ರಾ ಸಾಧಿಸಿದ್ದ ಮುಂಬೈ ನಂತರದ ನಾಲ್ಕು ಪಂದ್ಯಗಳಲ್ಲಿ ಸತತ ಜಯಭೇರಿ ಬಾರಿಸಿ ಟೂರ್ನಿಯಲ್ಲಿ ಅತ್ಯದ್ಭುತವಾಗಿ ಪುಟಿದೆದ್ದಿದೆ.  
ಪಂದ್ಯದ ಆರಂಭದಿಂದಲೇ ತವರಿನ ಪ್ರೇಕ್ಷಕರ ಬೆಂಬಲದೊಂದಿಗೆ ಕಣಕ್ಕಿಳಿದ ಮುಂಬೈ ಸಿಟಿ ಎಫ್.ಸಿ ಹೆಚ್ಚು ಪ್ರಾಬಲ್ಯ ಮೆರೆಯಿತು. ಪಂದ್ಯದ 25 ನೇ ನಿಮಿಷದಲ್ಲಿ ನಾರ್ಥ್ ಈಸ್ಟ್ ಯುನೈಟೆಡ್ ತಂಡದ ಆಟಗಾರ ಮುಂಬೈ ತಂಡದ ಡಿ. ಬಾಕ್ಸ್ ನಲ್ಲಿ ಚೆಂಡನ್ನು ಕೈಗೆ ತಾಗಿಸಿದ ಹಿನ್ನೆಲೆಯಲ್ಲಿ ಮುಂಬೈ ಗೆ ಪೆನಾಲ್ಟಿ ಅವಕಾಶ ಸಿಕ್ಕಿತು. ಈ ಅವಕಾಶವನ್ನು ಸುನಿಲ್ ಗೋಲಾಗಿ ಪರಿವರ್ತಿಸಿ ಗೋಳಿನ ಖಾತೆ ತೆರೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com