
2015ರ ವರ್ಷ ಭಾರತದ ಅಗ್ರ ಟೆನಿಸ್ ಶ್ರೆಯಾಂಕಿತೆ ಸಾನಿಯಾ ಮಿರ್ಜಾ ಹಾಗೂ ಸ್ವಿಸ್ ನ ಟೆನಿಸ್ ಆಟಗಾರ್ತಿ ಮಾರ್ಟಿನಾ ಹಿಂಗೀಸ್ ಜೊಡಿ ವುಮನ್ಸ್ ಟೆನ್ನಿಸ್ ಅಸೋಸಿಯೇಷನ್(ಡಬ್ಲ್ಯೂಟಿಎ)ನ ವರ್ಷದ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನ ಸಂಪಾದಿಸಿದ್ದಾರೆ.
2015ರ ಡಬ್ಲ್ಯೂಟಿಎ ರ್ಯಾಂಕಿಂಗ್ ಪಟ್ಟಿಯಲ್ಲಿ ಸಿಂಗಲ್ ನಲ್ಲಿ ಅಗ್ರಸ್ಥಾನ ಪಡೆದ ಸೆರೆನಾ ವಿಲಿಯಮ್ಸ್ ಹಾಗೂ ಮಹಿಳಾ ಡಬಲ್ಸ್ ನಲ್ಲಿ ಅಗ್ರಸ್ಥಾನಕ್ಕೇರಿರುವ ಸಾನಿಯಾ ಹಾಗೂ ಹಿಂಗೀಸ್ ಅವರಿಗೆ ದುಬೈ ಡ್ಯುಟಿ ಫ್ರಿ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಸಾಲ್ಹಾ ತಲಾಕ್ ಅಭಿನಂಧಿಸಿದ್ದಾರೆ.
ಸಾನಿಯಾ-ಹಿಂಗೀಸ್ ಜೋಡಿ 2015ರಲ್ಲಿ ಒಟ್ಟು 8 ಟೈಟಲ್ ಗಳನ್ನು ತಮ್ಮದಾಗಿಸಿಕೊಂಡಿದೆ. ಪ್ರಮುಖವಾಗಿ ವಿಂಬಲ್ಡನ್ ಸೇರಿದಂತೆ ಎರಡು ಗ್ರ್ಯಾಂಡ್ ಸ್ಲಾಮ್ ಹಾಗೂ ಯುಎಸ್ ಓಪನ್ ನಲ್ಲಿ ಪಾರುಪತ್ಯ ಮೆರೆದಿದ್ದಾರೆ.
ಡಬ್ಲ್ಯೂಟಿಎ ಫೈನಲ್ಸ್ ತಲುಪಿದ ಸಾನಿಯಾ-ಹಿಂಗೀಸ್ ಜೋಡಿ
ಸಿಂಗಾಪುರ: ವುಮನ್ಸ್ ಟೆನ್ನಿಸ್ ಅಸೋಸಿಯೇಷನ್(ಡಬ್ಲ್ಯೂಟಿಎ) ಸೆಮಿಫೈನಲ್ ಪಂದ್ಯದಲ್ಲಿ ಸಾನಿಯಾ ಮಿರ್ಜಾ ಹಾಗೂ ಮಾರ್ಟಿನಾ ಹಿಂಗೀಸ್ ಜೋಡಿ ಚೀನಾದ ಚಾನ್ ಹಾವೋ ಚಿಂಗ್ ಮತ್ತು ಚಾನ್ ಯಂಗ್ ಜೋಡಿಯನ್ನು 6-4, 6-2 ಸೆಟ್ ಗಳಿಂದ ಮಣಿಸಿ ಫೈನಲ್ಸ್ ತಪುಪಿದ್ದಾರೆ.
Advertisement