ಪ್ರಶಸ್ತಿ ಮೇಲೆ ಸೈನಾ ಕಣ್ಣು

ಪ್ರತಿಷ್ಠಿತ ವಿಶ್ವ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಅಮೋಘ ಪ್ರದರ್ಶನ ನೀಡಿ ಬೆಳ್ಳಿ ಪದಕ ಪಡೆದು ಚರಿತ್ರಾರ್ಹ ದಾಖಲೆ ಬರೆದ ಭಾರತದ ಸ್ಟಾರ್ ಬ್ಯಾಡ್ಮಿಂಟನ್...
ಸೈನಾ ನೆಹ್ವಾಲ್
ಸೈನಾ ನೆಹ್ವಾಲ್

ಟೋಕಿಯೋ: ಪ್ರತಿಷ್ಠಿತ ವಿಶ್ವ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಅಮೋಘ ಪ್ರದರ್ಶನ ನೀಡಿ ಬೆಳ್ಳಿ ಪದಕ ಪಡೆದು ಚರಿತ್ರಾರ್ಹ ದಾಖಲೆ ಬರೆದ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಮಂಗಳವಾರದಿಂದ ಆರಂಭವಾಗುತ್ತಿರುವ 275,000 ಡಾಲರ್ ಬಹುಮಾನ ಮೊತ್ತದ ಜಪಾನ್ ಸೂಪರ್ ಸಿರೀಸ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಲು ಸಜ್ಜಾಗಿದ್ದಾರೆ.

ಮೊದಲ ದಿನ ಅರ್ಹತಾ ಸುತ್ತಿನ ಪಂದ್ಯಗಳು ನಡೆದರೆ, ಬುಧವಾರದಿಂದ ಪ್ರಧಾನ ಸುತ್ತು ಆರಂಭವಾಗುತ್ತಿದ್ದು, 25 ವರ್ಷದ ಸೈನಾ, ಈ ಟೂರ್ನಿಯಲ್ಲಿ ದ್ವಿತೀಯ ಶ್ರೇಯಾಂಕ ಪಡೆದಿದ್ದಾರೆ. ಮೊದಲ ಸುತ್ತಿನಲ್ಲಿ ಸೈನಾ ಥಾಯ್ಲೆಂಡ್ ಆಟಗಾರ್ತಿ ಬುಸಾನನ್ ಒಂಗ್ ಬುಮ್ರುಂಗ್ ಪಾನ್ ವಿರುದ್ಧ ಸೈನಾ ಹೋರಾಟ ಆರಂಭಿಸಲಿದ್ದಾರೆ.

ಆರಂಭಿಕ ಸುತ್ತಿನ ಪಂದ್ಯದಲ್ಲಿ ಗೆಲುವು ಸಾಧಿಸಿದ್ದೇ ಆದಲ್ಲಿ ಎರಡು ಬಾರಿ ವಿಶ್ವ ಚಾಂಪಿಯನ್ ಶಿಪ್‍ನಲ್ಲಿ ಕಂಚಿನ ಪದಕ ಗೆದಿರುವ ಭಾರತದ ಮತ್ತೋರ್ವ ಪ್ರಮುಖ ಆಟಗಾರ್ತಿ ಹಾಗೂ ತನ್ನೂರಿನವರೇ ಆದ ಪಿ.ವಿ. ಸಿಂಧು ವಿರುದ್ಧ ಸೈನಾ ಎರಡನೇ ಸುತ್ತಿನಲ್ಲಿ ಸೆಣಸಲಿದ್ದಾರೆ. 2014ರ ಇಂಡಿಯಾ ಗ್ರಾಂಡ್ ಪ್ರಿಕ್ಸ್ ಗೋಲ್ಡ್ ಟೂರ್ನಿಯ ಫೈನಲ್ ನಂತರ ಈರ್ವರೂ ಮೊದಲ ಬಾರಿಗೆ ಮುಖಾಮುಖಿಯಾಗಲಿದ್ದಾರೆ.

ಇನ್ನುಳಿದಂತೆ ಈ ಪಂದ್ಯಾವಳಿಯಲ್ಲಿ ಪುರುಷರ ವಿಭಾಗದಲ್ಲಿ ವಿಶ್ವದ ನಾಲ್ಕನೇ ಶ್ರೇಯಾಂಕಿತ ಕಿಡಾಂಬಿ ಶ್ರೀಕಾಂತ್, ಎಚ್.ಎಸ್. ಪ್ರಣೋಯ್ ಭಾಗವಹಿಸುತ್ತಿದ್ದು, ಶುಭಾರಂಭದ ನಿರೀಕ್ಷೆಯಲ್ಲಿದ್ದಾರೆ. ಇನ್ನು ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ ಜೋಡಿ ಪ್ರಮುಖ ಆಕರ್ಷಣೆ ಎನಿಸಿದ್ದಾರೆ. ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಪದಕ ಗೆಲ್ಲುವಲ್ಲಿ ವಿಫಲವಾದ ಜ್ವಾಲಾ ಹಾಗೂ ಅಶ್ವಿನಿ ಜೋಡಿ ಈ ಪಂದ್ಯಾವಳಿಯನ್ನು ಗಂಭೀರವಾಗಿ ಪರಿಗಣಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com