
ಹುಬ್ಬಳ್ಳಿ: ಆರಂಭಿಕ ಬ್ಯಾಟ್ಸ್ ಮನ್‍ಗಳಾದ ಸಾದಿಕ್ ಕಿರ್ಮಾನಿ (ಅಜೇಯ 87 ರನ್, 53 ಎಸೆತ, 5 ಬೌಂಡರಿ, 5 ಸಿಕ್ಸರ್) ಹಾಗೂ ಸಮರ್ಥ್ ಊಟಿ (51 ರನ್, 40 ಎಸೆತ, 3 ಬೌಂಡರಿ, 2 ಸಿಕ್ಸರ್) ಯ ಆಕರ್ಷಕ ಶತಕ (129)ದ ಜತೆಯಾಟದ ನೆರವಿನಿಂದ ನಮ್ಮ ಶಿವಮೊಗ್ಗ ತಂಡ ಕೆಪಿಎಲ್ ಪಂದ್ಯಾವಳಿಯಲ್ಲಿ ರಾಕ್ಸ್ಟಾರ್ಸ್ ವಿರುದ್ಧ ಗೆಲುವು ದಾಖಲಿಸಿದೆ.
ಮಂಗಳವಾರ ರಾಜನಗರದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ನಮ್ಮ ಶಿವಮೊಗ್ಗ ತಂಡ 8 ವಿಕೆಟ್‍ಗಳಿಂದ ರಾಕ್‍ಸ್ಟಾರ್ಸ್ ತಂಡವನ್ನು
ಮಣಿಸಿತು.ಟಾಸ್ ಗೆದ್ದ ಶಿವಮೊಗ್ಗ ಪಡೆ ಫೀಲ್ಡಿಂಗ್ ಆಯ್ದುಕೊಂಡಿತ್ತು.ಮೊದಲು ಬ್ಯಾಟಿಂಗ್ ಮಾಡಲಿಳಿದ ರಾಕ್‍ಸ್ಟಾರ್ಸ್ ತಂಡ 20 ಓವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ 146 ರನ್ ಕಲೆ ಹಾಕಿತು.ಈ ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಿದ ನಮ್ಮ ಶಿವಮೊಗ್ಗ ತಂಡ ಕೇವಲ 16.3 ಓವರ್‍ಗಳಲ್ಲಿ ಕೇವಲ 2 ವಿಕೆಟ್‍ಗೆ 148 ರನ್ ಕಲೆ ಹಾಕಿತಲ್ಲದೆ,21 ಎಸೆತಗಳು ಬಾಕಿ ಇರುವಂತೆಯೇ ಜಯಭೇರಿ ಬಾರಿಸಿತು.
ಶತಕದ ಜತೆಯಾಟ:ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಿದ ನಮ್ಮ ಶಿವಮೊಗ್ಗ ತಂಡಕ್ಕೆ ಆರಂಭಿಕರಾಗಿ ಕಣಕ್ಕಿಳಿದ ವಿಕೆಟ್‍ಕೀಪರ್ ಸಾದಿಕ್ ಕಿರ್ಮಾನಿ ಹಾಗೂ ಸಮರ್ಥ್ ಊಟಿ
ಅತ್ಯುತ್ತಮ ಬ್ಯಾಟಿಂಗ್ ಮೂಲಕ ಭದ್ರ ಅಡಿಪಾಯ ಹಾಕಿಕೊಟ್ಟರು.
ರಾಜೀವ್ ಅರ್ಧಶತಕ: ರಾಕ್‍ಸ್ಟಾರ್ಸ್ ತಂಡಕ್ಕೆ ಆರಂಭಿಕರಾಗಿ ಕಣಕ್ಕಿಳಿದ ಭರವಸೆಯ
ಆಟಗಾರ ರಾಜೀವ್ 52 ರನ್ ಗಳಿಸಿ ತಮ್ಮ ತಂಡಕ್ಕೆ ಆಸರೆಯಾದರು.
ಸಂಕ್ಷಿಪ್ತ ಸ್ಕೋರ್: ರಾಕ್‍ಸ್ಟಾರ್ಸ್ 20 ಓವರ್ ಗಳಲ್ಲಿ 4 ವಿಕೆಟ್‍ಗೆ 146 (ರಾಜೀವ್ 52, ಚರಣ್ ತೇಜ 41, ಮದನ್ 31, ದೀವಿಕ್ 25ಕ್ಕೆ 2, ಭಾವೇಶ್ 31ಕ್ಕೆ 1) ನಮ್ಮ ಶಿವಮೊಗ್ಗ 16.3 ಓವರ್‍ಗಳಲ್ಲಿ 2 ವಿಕೆಟ್‍ಗೆ 148 (ಸಾದಿಕ್ ಕಿರ್ಮಾನಿ 87, ಸಮರ್ಥ್ 51, ಸುದೀಪ್ 4ಕ್ಕೆ
1, ರಾಜು ಗೌಡ 15ಕ್ಕೆ 1) ಪಂದ್ಯಶ್ರೇಷ್ಠ: ಸಾದಿಕ್ ಕಿರ್ಮಾನಿ
ಟೈಗರ್ಸ್ ಮಣಿಸಿದ ಪ್ಯಾಂಥರ್ಸ್
ಮಾಯಾಂಕ್ ಅಗರ್ವಾಲ್‍ರ ಅದ್ಭುತ ಶತಕದ ಸಹಾಯದಿಂದ ಬೆಳಗಾವಿ ಪ್ಯಾಂಥರ್ಸ್ ತಂಡ, ಮಂಗಳವಾರ ನಡೆದ 2ನೇ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡವನ್ನು 70 ರನ್‍ಗಳ ಭಾರಿ ಅಂತರಿಂದ ಮಣಿಸಿತು. ಮೊದಲು ಬ್ಯಾಟ್ ಮಾಡಿದ್ದ ಬೆಳಗಾವಿ, 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 210 ರನ್ ಪೇರಿಸಿತು. ನಂತರ, ಹುಬ್ಬಳ್ಳಿ ತಂಡ, 19.4 ಓವರ್‍ಗಳಲ್ಲಿ ಕೇವಲ 140 ರನ್ ಗಳನ್ನು ಗಳಿಸಿ ಆಲೌಟ್ ಆಯಿತು.
ಸಂಕ್ಷಿಪ್ತ ಸ್ಕೋರ್: ಬೆಳಗಾವಿ ಪ್ಯಾಂಥರ್ಸ್ 20 ಓವರ್‍ಗಳಲ್ಲಿ 4 ವಿಕೆಟ್‍ಗೆ 210 (ಅಗರ್ವಾಲ್ 103, ಅಭಿಷೇಕ್ ರೆಡ್ಡಿ 57; ಶ್ರೀನಾಥ್ ಅರವಿಂದ್ 36ಕ್ಕೆ 1); ಹುಬ್ಬಳ್ಳಿ 19.4 ಓವರ್‍ಗಳಲ್ಲಿ 140 (ಮೊಹಮ್ಮದ್ 31, ಚೇತನ್ ವಿಲಿಯಂ 30; ವಿನಯ್ ಕುಮಾರ್ 32ಕ್ಕೆ 2
Advertisement