
ಹುಬ್ಬಳ್ಳಿ: ಆರಂಭಿಕ ರವಿಕುಮಾರ್ ಸಮರ್ಥ್ (78 ರನ್, 60 ಎಸೆತ, 8 ಬೌಂಡರಿ, 1 ಸಿಕ್ಸರ್) ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಬಿಜಾಪುರ ಬುಲ್ಸ್ ತಂಡ ನಮ್ಮ ಶಿವಮೊಗ್ಗ ತಂಡದ ವಿರುದ್ಧ 7 ವಿಕೆಟ್‍ಗಳ ಜಯ ಪಡೆಯಿತು. ಬುಧವಾರ ರಾಜನಗರದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ 162 ರನ್ ಗೆಲುವಿನ ಗುರಿ ಪಡೆದಿದ್ದ ಬಿಜಾಪುರ ಬುಲ್ಸ್ 20 ಓವರ್‍ಗಳಲ್ಲಿ 3 ವಿಕೆಟ್ ನಷ್ಟಕ್ಕೆ 165 ರನ್ ಪೇರಿಸಿ ಜಯದ ನಗೆಬೀರಿತು.
ಸಮರ್ಥ ಬ್ಯಾಟಿಂಗ್ ವಿಜಯದ ಗುರಿ ಬೆಂಬತ್ತಿದ ಶಿವಮೊಗ್ಗ ಪರ ರವಿಕುಮಾರ್ ಸಮರ್ಥ್ ಜೀವ ತುಂಬಿದರು. ರಾಜು ಭಟ್ಕಳ್ (39ರನ್, 30 ಎಸೆತ, 5 ಬೌಲಿಂಗ್) ಜತೆಗೆ ಆರಂಭಿಕರಾಗಿ ಕಣಕ್ಕಿಳಿದ ಅವರು, ಮೊದಲ ವಿಕೆಟ್‍ಗೆ 81 ರನ್‍ಗಳ ಜತೆಯಾಟವಾಡಿದರು. ಈ ವೇಳೆ ರಾಜು ಭಟ್ಕಳ್, ಶ್ರೇಯಸ್ ಗೋಪಾಲ್ಬೌಲಿಂಗ್‍ನಲ್ಲಿ ವಿಕೆಟ್ ಒಪ್ಪಿಸಿದರು. ನಂತರ ಬಂದ ಹಿರಿಯ ಬ್ಯಾಟ್ಸ್ ಮನ್ ರಾಬಿನ್ ಉತ್ತಪ್ಪ 24 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 36 ರನ್ ದಾಖಲಿಸಿದರು. ಇನಿಂಗ್ಸ್ ಉದ್ದಕ್ಕೂ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಸಮರ್ಥ್ ಜಯದ ರೂವಾರಿ ಎನಿಸಿದರು. ಬಿಜಾಪುರ ಬುಲ್ಸ್ ತಂಡದ ಪರ ವೈಶಾಕ್ ವಿಜಯ್ ಕುಮಾರ್ 3, ಮಿಥುನ್, ಅಪ್ಪಣ್ಣ ಮತ್ತು ಕಾರ್ಯಪ್ಪ ತಲಾ 1 ವಿಕೆಟ್ ಕಬಳಿಸಿದರು. ಸ್ಟಾಕ್ ಆಟ ವ್ಯರ್ಥ ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ನಮ್ಮ ಶಿವಮೊಗ್ಗ ತಂಡ 20 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 161 ರನ್ ದಾಖಲಿಸಿತು.ನಮ್ಮ ಶಿವಮೊಗ್ಗ ತಂಡಕ್ಕೆ ಆರಂಭಿಕಸಾದಿಕ್ ಕಿರ್ಮಾನಿ ಹಾಗೂ ಯುವ ಬ್ಯಾಟ್ಸ್‍ಮನ್ ಕೌನೆಯಾನ್ ಅಬ್ಬಾಸ್ ತಂಡಕ್ಕೆ ಬೆನ್ನೆಲುಬಾಗಿ ನಿಂತರು. ಮತ್ತೊಬ್ಬ ಆರಂಭಿಕ ಸಮರ್ಥ್ ಊಟಿ (3) ಆರಂಭದಲ್ಲೇ ವಿಕೆಟ್ ಒಪ್ಪಿಸಿದರು. ಆ ಮೂಲಕ ಶಿವಮೊಗ್ಗ ತಂಡಕ್ಕೆ ಆರಂಬಿsಕ ಆಘಾತ ಎದುರಾಯಿತು. ಈ ವೇಳೆ ಜತೆಯಾದ ಸಾದಿಕ್ ಹಾಗೂ ಅಬ್ಬಾಸ್ ತಂಡಕ್ಕೆ 90 ರನ್‍ಗಳ ಜತೆಯಾಟವಾಡುವ ಮೂಲಕ ತಂಡವನ್ನು ಮೇಲೆತ್ತಿದರು. ನಂತರ ಮಧ್ಯಮ ಕ್ರಮಾಂಕದಲ್ಲಿಯಾವುದೇ ಆಟಗಾರ ಪರಿಣಾಮಕಾರಿಯಾದ ಬ್ಯಾಟಿಂಗ್ ಪ್ರದರ್ಶನ ನೀಡಲು ವಿಫಲರಾದ ಹಿನ್ನೆಲೆಯಲ್ಲಿ ಶಿವಮೊಗ್ಗ ತಂಡ ದೊಡ್ಡ ಗುರಿಯನ್ನು ಪೇರಿಸುವ ಅವಕಾಶ ಕೈ ಚೆಲ್ಲಿತು.
ಸಂಕ್ಷಿಪ್ತ ಸ್ಕೋರ್
ನಮ್ಮ ಶಿವಮೊಗ್ಗ 20 ಓವರ್‍ಗಳಲ್ಲಿ 7
ವಿಕೆಟ್ ನಷ್ಟಕ್ಕೆ 161 (ಸಾದಿಕ್ 61,
ಅಬ್ಬಾಸ್ 58, ವೈಶಾಕ್ 20ಕ್ಕೆ 3)
ಬಿಜಾಪುರ ಬುಲ್ಸ್ 20 ಓವರ್‍ಗಳಲ್ಲಿ 3
ವಿಕೆಟ್ ನಷ್ಟಕ್ಕೆ 165 (ಸಮರ್ಥ್
ಅಜೇಯ 78, ರಾಜು ಭಟ್ಕಳ್ 39,
ಶ್ರೇಯಸ್ 35ಕ್ಕೆ 1)
ಪಂದ್ಯಶ್ರೇಷ್ಠ: ಆರ್ ಸಮರ್ಥ್
ಬೆಳಗಾವಿ ಪ್ಯಾಂಥರ್ಸ್‍ಗೆ ಜಯ
ಮಳೆಯ ಅಡಚಣೆಯಾಗಿ ಕೇವಲ 10 ಓವರ್‍ಗೆ ಇಳಿದ ದಿನದ ಮತ್ತೊಂದು ಪಂದ್ಯದಲ್ಲಿ ವಿನಯ್ ಕುಮಾರ್‍ರ (52 ರನ್, 28 ಎಸೆತ, 5 ಬೌಂಡರಿ, 3 ಸಿಕ್ಸರ್ ಹಾಗೂ ಬೌಲಿಂಗ್‍ನಲ್ಲಿ 2 ವಿಕೆಟ್)ಉತ್ತಮ ಪ್ರದರ್ಶನದ ನೆರವಿನಿಂದ ಬೆಳಗಾವಿ ಪ್ಯಾಂಥರ್ಸ್ ತಂಡ 21 ರನ್‍ಗಳ ಅಂತರದಲ್ಲಿ ಮೈಸೂರು ವಾರಿಯರ್ಸ್ ತಂಡವನ್ನು ಮಣಿಸಿತು. ಟಾಸ್ ಸೋತು, ಮೊದಲು ಬ್ಯಾಟಿಂಗ್ ಮಾಡಿದ ಬೆಳಗಾವಿ 10 ಓವರ್‍ಗಳಲ್ಲಿ 4 ವಿಕೆಟ್‍ಗೆ 91 ರನ್ ದಾಖಲಿಸಿತು. ನಂತರ ಈ ಮೊತ್ತ ಬೆನ್ನಟ್ಟಿದ ಮೈಸೂರು ವಾರಿಯರ್ಸ್ 10 ಓವರ್‍ಗಳಲ್ಲಿ 9 ವಿಕೆಟ್‍ಗೆ 74 ರನ್ ಪೇರಿಸಲಷ್ಟೇ ಶಕ್ತವಾಯಿತು.
ಸಂಕ್ಷಿಪ್ತ ಸ್ಕೋರ್: ಬೆಳಗಾವಿ ಪ್ಯಾಂಥರ್ಸ್ 10 ಓವರ್‍ಗಳಲ್ಲಿ 4 ವಿಕೆಟ್‍ಗೆ 91(ವಿನಯ್ 52, ಅಭಿಷೇಕ್ 32, ಸುಚಿತ್ 6ಕ್ಕೆ 2); ಮೈಸೂರು ವಾರಿಯರ್ಸ್ 10
ಓವರ್‍ನಲ್ಲಿ 9 ವಿಕೆಟ್‍ಗೆ 74 (ಶೋಯೆಬ್ 11, ಮನೀಷ್ 9, ವಿನು 18ಕ್ಕೆ 3).
Advertisement