
ನ್ಯೂ ಸೌಥ್ ವೇಲ್ಸ್ : ಇತ್ತೀಚೆಗಷ್ಟೇ ಆಸ್ಟ್ರೇಲಿಯಾದ ಆಲ್ರೌಂಡರ್ ಶೇನ್ ವ್ಯಾಟ್ಸನ್ ಟೆಸ್ಟ್ ಕ್ರಿಕೆಟ್‍ಗೆ ದಿಢೀರನೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ, ಈಗ ಆಸೀಸ್ ವಿಕೆಟ್‍ಕೀಪರ್ ಬ್ರಾಡ್ ಹಡಿನ್ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳಿದ್ದಾರೆ.ಇಂಗ್ಲೆಂಡ್ ವಿರುದ್ಧದ ಆ್ಯಶಸ್ ಟೆಸ್ಟ್ ಸರಣಿಯ ಆರಂಭಿಕ ಪಂದ್ಯದಲ್ಲಿ ಆಡಿದ್ದ ಹಡಿನ್, ಬುಧವಾರ ತಮ್ಮ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. 2001ರಲ್ಲಿ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಏಕದಿನ ಕ್ರಿಕೆಟ್‍ಗೆ ಪದಾರ್ಪಣೆ ಮಾಡಿದ್ದ ಹಡಿನ್, ನಂತರ ಟೆಸ್ಟ್ ತಂಡದಲ್ಲಿ ಪದಾರ್ಪಣೆ ಮಾಡಲು ಸುಮಾರು ಏಳು ವರ್ಷ ಕಾಲ ಕಾಯಬೇಕಾಯಿತು. 2008ರಲ್ಲಿ ಆಸೀಸ್‍ನ ದಂತಕತೆ ಆ್ಯಡಂ ಗಿಲ್ ಕ್ರಿಸ್ಟ್ ನಿವೃತ್ತಿ ಪಡೆದ ನಂತರ, ಹಡಿನ್ ವೆಸ್ಟ್‍ಇಂಡೀಸ್ ವಿರುದ್ಧ ಪಂದ್ಯ ದಲ್ಲಿ ಪದಾರ್ಪಣೆ ಮಾಡಿದರು. 66 ಪಂದ್ಯಗಳ ನ್ನಾಡಿರುವ ಹಡಿನ್, 32.98 ಸರಾಸರಿಯಲ್ಲಿ 3,266 ರನ್ ಪೇರಿಸಿದ್ದಾರೆ. ವಿಕೆಟ್ ಹಿಂದೆ 262 ಕ್ಯಾಚ್‍ಗಳು, ಎಂಟು ಸ್ಟಂಪ್‍ಗಳನ್ನು
ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
Advertisement