
ಬೆಂಗಳೂರು: ತಮ್ಮ ಹುದ್ದೆ ಖಾಯಂ ಮಾಡುವ ಬೇಡಿಕೆಯನ್ನು ಮುಂದಿಟ್ಟುಕೊಂಡು ಕಳೆದ 13 ದಿನಗಳಿಂದ ನಗರದಲ್ಲಿ ಮುಷ್ಕರ ಹೂಡಿದ್ದ ಕರ್ನಾಟಕ ಕ್ರೀಡಾ ಪ್ರಾಧಿಕಾರದ ತರಬೇತುದಾರರು ಬುಧವಾರ ಸಂಜೆ ತಮ್ಮ ಮುಷ್ಕರವನ್ನು ತಾತ್ಕಾಲಿಕವಾಗಿ ಕೈಬಿಟ್ಟಿದ್ದಾರೆ. ಬುಧವಾರ ವಿಧಾನಸೌಧದಲ್ಲಿ ಕ್ರೀಡಾ ಸಚಿವ ಅಭಯ್ ಚಂದ್ರ ಜೈನ್, ``ಕ್ರೀಡಾ ಪ್ರಾಧಿಕಾರದ
ತರಬೇತುದಾರರ ಸದಸ್ಯರ ಸಭೆ ನಡೆಸಿ ಚರ್ಚಿಸಲಾಯಿತು. ಈ ವೇಳೆ ಮಾತನಾಡಿದ ಸಚಿವರು ತರಬೇತುದಾರರ ಹುದ್ದೆಯನ್ನು ಖಾಯಂಗೊಳಿಸಲು ಎಲ್ಲ ಪ್ರಯತ್ನ ನಡೆಸುತ್ತಿದ್ದು, ಈ ಸಂಬಂಧಪಟ್ಟ ಫೈಲ್ ಅನ್ನು ಮುಂಖ್ಯಮಂತ್ರಿಯವರಿಗೆ ರವಾನಿಸಲಾಗಿದೆ. ಮುಖ್ಯಮಂತ್ರಿಯವರು ಇದಕ್ಕೆ ಒಪ್ಪಿಕೊಂಡಿದ್ದು, ಕ್ಯಾಬಿನೆಟ್‍ನಲ್ಲಿ ಒಪ್ಪಿಗೆ ಪಡೆಯಬೇಕಿದೆ. ನಿಮ್ಮ ಬೇಡಿಕೆಯನ್ನು ಪೂರ್ಣಗೊಳಿಸುವ ಜವಾಬ್ದಾರಿ ನಮ್ಮದು ಎದಕ್ಕಾಗಿ ಸಕಲ ಪ್ರಯತ್ನ ನಡೆಸುತ್ತಿದ್ದೇನೆ. ಕಳೆದ ಹಲವು ವರ್ಷಗಳಿಂದ ಸಾಧ್ಯವಾಗದ ಕೆಲಸವನ್ನು ದಿಢೀರನೆ ಏಕಾಏಕಿ ಪೂರ್ಣಗೊಳಿಸಲು ಸಾಧ್ಯವಿಲ್ಲ. ನನಗೆ ಸ್ವಲ್ಪ ಕಾಲಾವಕಾಶ ನೀಡಿ'' ಎಂದು ಕೇಳಿಕೊಂಡರು. ``ಇನ್ನು ಇಷ್ಟು ದಿನಗಳ ಕಾಲ ಪ್ರತಿಭಟನೆಯಲ್ಲಿದ್ದ ತರಬೇತುದಾರರ ವೇತನದಲ್ಲಿ ಯಾವುದೇ ಕಡಿತಗೊಳಿಸಬಾರದು. ಅವರು ತಮ್ಮ ಹಕ್ಕನ್ನು ಕೇಳಿತ್ತಿದ್ದು,
ಅವರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ'' ಸಚಿವರು ಭರವಸೆ ನೀಡಿದರು.
Advertisement