ವಿಶ್ವದ ಎರಡನೇ ರ್ಯಾಂಕಿಂಗ್‍ನ ಆಟಗಾರ್ತಿ ಸಿಮೋನಾ ಹಾಲೆಪ್ ವರ್ಷದ ಗ್ರಾಂಡ್ ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಆಘಾತ ಅನುಭವಿಸಿದ್ದಾರೆ. ಶುಕ್ರವಾರ ನಡೆದ ಮಹಿಳೆಯರ ಮೊದಲ ಸೆಮಿಫೈನಲ್ ಸುತ್ತಿನ ಪಂದ್ಯದಲ್ಲಿ ಸಿಮೋನಾ ಹಾಲೆಪ್, ತಮ್ಮ ಪ್ರತಿಸ್ಪರ್ಧಿ 26ನೇ ಶ್ರೇಯಾಂಕಿತೆ ಇಟಲಿಯ ಪ್ಲಾವಿಯಾ ಪೆನೆಟ್ಟಾ ವಿರುದ್ಧ ಪರಾಭವ ಗೊಂಡು, ಟೂರ್ನಿಯಲ್ಲಿ ತಮ್ಮ ಹೋರಾಟ ಅಂತ್ಯ ಗೊಳಿಸಿದರು. ಕೇವಲ 59 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಹಾಲೆಪ್ ತೀವ್ರ ಆಘಾತಕಾರಿ ಸೋಲನುಭವಿಸಿದ್ದು, ಅಚ್ಚರಿ ಮೂಡಿಸಿತು.
ಟೂರ್ನಿಯ ಆರಂಭದಲ್ಲಿ ಮೂರನೇ ರ್ಯಾಂಕಿಂಗ್ ನ ರಷ್ಯಾದ ಆಟಗಾರ್ತಿ ಮರಿಯಾ ಶರಪೋವಾ ಗಾಯದ ಸಮಸ್ಯೆಯಿಂದ ಹಿಂದೆ ಸರಿದ ನಂತರ ಐತಿಹಾಸಿಕ ಸಾಧನೆಯತ್ತ ಕಣ್ಣಿಟ್ಟಿರುವ ಸೆರೆನಾ ವಿಲಿಯಮ್ಸ್ ಗೆ ಫೈನಲ್‍ನಲ್ಲಿ ಪೈಪೋಟಿ ನೀಡುವ ನಿರೀಕ್ಷೆ ಹಾಲೆಪ್ ಹೆಗಲ ಮೇಲಿತ್ತು. ಇನ್ನು ಗುರುವಾರ ತಡರಾತ್ರಿ ನಡೆಯಬೇಕಿದ್ದ ಪಂದ್ಯಗಳು ಮಳೆಯಿಂದ ಅಡಚಣೆಗೊಳಗಾದ ಹಿನ್ನೆಲೆಯಲ್ಲಿ ಪಂದ್ಯಗಳು ಒಂದು ದಿನ ಮೂಂದೂಡಲಾಯಿತು. ಹಾಲಿ ಚಾಂಪಿಯನ್ಸೆರೆನಾ ವಿಲಿಯಮ್ಸ್ ಉಪಾಂತ್ಯ ಇಟಲಿಯ ರಾಬೆರ್ಟಾ ವಿನ್ಸಿ ವಿರುದ್ಧ ಸೆಣಸಲಿದ್ದಾರೆ. ಈ ಪಂದ್ಯದಲ್ಲಿ ಗೆದ್ದರೆ ಅಂತಿಮ ಪಂದ್ಯದಲ್ಲಿ ಫ್ಲಾವಿಯಾ ವಿರುದ್ಧ ಸೆಣಸಲಿದ್ದಾರೆ
Advertisement