ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಎರಡನೇ ಹಂತದ ಕೆಪಿಎಲ್ ಪಂದ್ಯಗಳು

ಕಳೆದ ಎಂಟು ದಿನಗಳಿಂದ ಹುಬ್ಬಳ್ಳಿಯಲ್ಲಿ ಯಶಸ್ವಿಯಾಗಿ ನಡೆದ ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿ (ಕೆಪಿಎಲ್) ಈಗ ಮೈಸೂರಿಗೆ ಆಗಮಿಸಿದ್ದು,...
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣ
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣ
Updated on

ಮೈಸೂರು: ಕಳೆದ ಎಂಟು ದಿನಗಳಿಂದ ಹುಬ್ಬಳ್ಳಿಯಲ್ಲಿ ಯಶಸ್ವಿಯಾಗಿ ನಡೆದ ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿ (ಕೆಪಿಎಲ್) ಈಗ ಮೈಸೂರಿಗೆ ಆಗಮಿಸಿದ್ದು, ಈ ಹಂತದಲ್ಲೂ ಯಶಸ್ಸು ಕಾಣುವ ನಿರೀಕ್ಷೆ ಇದೆ.

ಶನಿವಾರ ಟೂರ್ನಿಯ ಎರಡನೇ ಹಂತ ಮೈಸೂರಿನ ಮಾನಸಗಂಗೋತ್ರಿ ಕ್ರೀಡಾಂಗಣದಲ್ಲಿ ಆರಂಭವಾಗಲಿದ್ದು ಅಭಿಮಾನಿಗಳಿಂದ ಉತ್ತಮ  ಬೆಂಬಲದ ನಿರೀಕ್ಷೆ ಇದೆ. ಕಳೆದ ಆವೃತ್ತಿಯಲ್ಲಿ ಮೈಸೂರು ವಾರಿಯರ್ಸ್ ತಂಡ ಚಾಂಪಿಯನ್  ಪಟ್ಟ  ಅಲಂಕರಿಸಿತ್ತು. ಈ ಬಾರಿ ಹುಬ್ಬಳ್ಳಿ ಆವೃತ್ತಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡದಿರುವ ಮೈಸೂರು ವಾರಿಯರ್ಸ್ ತವರಿನಲ್ಲಿ ಉತ್ತಮ ಪ್ರದರ್ಶನ ನೀಡುವ  ಭರವಸೆಯಲ್ಲಿದೆ.

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣ ಸಕಲ ರೀತಿಯಲ್ಲೂ ಸಿದ್ದವಾಗಿದ್ದು ಸೆ.12 ರಂದು ಮಧ್ಯಾಹ್ನ 1.30ಕ್ಕೆ ಬೆಳಗಾವಿ ಪ್ಯಾಂಥರ್ಸ್ ಮತ್ತು  ನಮ್ಮ ಶಿವಮೊಗ್ಗ ತಂಡ ಮುಖಾಮುಖಿ ಆಗಲಿದ್ದು, 5.30ಕ್ಕೆ ಮಂಗಳೂರು ಯುನೈಟೆಡ್ ಮತ್ತು ಬಳ್ಳಾರಿ ಟಸ್ಕರ್ಸ್ ನಡುವೆ ಪಂದ್ಯ ನಡೆಯಲಿದೆ.

ಪ್ರಸಕ್ತ ಸಾಲಿನಲ್ಲಿ  ಈವರೆಗೂ 16 ಪಂದ್ಯಗಳು  ಮುಕ್ತಾಯವಾಗಿವೆ. ಇನ್ನು 12 ಲೀಗ್ ಪಂದ್ಯಗಳು ಬಾಕಿ ಇವೆ.  ಪ್ಲೇ-ಆಫ್  ಸುತ್ತಿನ ಪಂದ್ಯಗಳು ಕೂಡ ಇಲ್ಲೇ ನಡೆಯಲಿವೆ. ಈವರೆಗಿನ ಪಂದ್ಯದಲ್ಲಿ ಬೆಳಗಾವಿ ಪ್ಯಾಂಥರ್ಸ್ ಮತ್ತು ಬಿಜಾಪುರ ಬುಲ್ಸ್  ಅಜೇಯವಾಗುಳಿದಿದ್ದು, ಅಂಕಪಟ್ಟಿ ಯಲ್ಲಿ ತಲಾ 7 ಅಂಕಗಳೊಂದಿಗೆ ಕ್ರಮವಾಗಿ ಅಗ್ರ ಎರಡು ಸ್ಥಾನದಲ್ಲಿವೆ. ನಮ್ಮ ಶಿವಮೊಗ್ಗ ಆಡಿರುವ 4 ಪಂದ್ಯಗಳಿಂದ 3ರಲ್ಲಿ ಜಯ ಹಾಗೂ
1ರಲ್ಲಿ ಸೋಲಿನೊಂದಿಗೆ 6 ಅಂಕಗಳನ್ನು ಗಳಿಸಿದ್ದು ಮೂರನೇ ಸ್ಥಾನದಲ್ಲಿದೆ.  


ನಾಲ್ಕನೇ ಸ್ಥಾನದಲ್ಲಿ ಮಂಗಳೂರು ಯುನೈಟೆಡ್ ತಂಡ ಕಾಣಿಸಿಕೊಂಡಿದೆ.  ಪ್ರಸಕ್ತ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿದರುವ ಮೈಸೂರು ವಾರಿಯರ್ಸ್  ನಾಲ್ಕು ಪಂದ್ಯಗಳಿಂದ  ಕೇವಲ 2 ಅಂಕಗಳನ್ನು ಕಲೆ ಹಾಕಿದ್ದು,  7 ನೇ  ಸ್ಥಾನಕ್ಕೆ ಕುಸಿದಿದೆ. ಹಾಗಾಗಿ ತವರಿನ ಅಂಗಣದಲ್ಲಿ  ಮೈಸೂರು ವಾರಿಯರ್ಸ್  ಮತ್ತೆ ಗೆಲುವಿನ ಲಯಕ್ಕೆ ಮರಳುವುದೇ ಎಂಬ ಕುತೂಹಲ ಮೂಡಿಸಿದೆ. ಇನ್ನು ರಾಕ್‍ಸ್ಟಾರ್ಸ್ ತಂಡ ಟೂರ್ನಿಯಲ್ಲಿ ಇನ್ನಷ್ಟೇ ಗೆಲವಿನ ಖಾತೆ ತೆರೆಯಬೇಕಿದೆ.

ಮಕ್ಕಳಿಗೆ ಉಚಿತ ಪ್ರವೇಶ ಗುರುತಿನ ಚೀಟಿ ಮತ್ತು ಶಾಲಾ ಸಮವಸ್ತ್ರದಿಂದ ಬರುವ ಮಕ್ಕಳು ಮತ್ತು ಅಂಗವಿಕಲರಿಗೆ ಗೇಟ್ ನಂ. 5ರಿಂದ ಉಚಿತವಾಗಿ ಸ್ಥಳಾವಕಾಶ ಕಲ್ಪಿಸಲಾಗಿದೆ. ಉಳಿದ ಸಾರ್ವಜನಿಕರಿಗೆ ತಲಾ 25 ಮತ್ತು 45 ಮೊತ್ತದ ಟಿಕೆಟ್ ಮಾರಾಟ ಮಾಡಲಾಗುತ್ತಿದೆ. ಸ್ಥಳೀಯ ಕ್ಲಬ್ ವೊಂದರಲ್ಲಿ ಅತ್ಯುತ್ತಮ ಪ್ರದರ್ಶನ  ನೀದ ನಿಕಿನ್ ಜೋಷ್ ಆಯ್ಕೆಯಾಗಿರುವುದು ಸಂತೋಷ ತಂದಿದೆ. ಟಿಕೆಟ್‍ಗಳು ಆನ್ ಲೈನ್ ಮತ್ತು ಕೆಎಸ್ ಸಿಎ ಕೌಂಟರ್ ನಲ್ಲಿ ದೊರೆಯಲಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com