
ನ್ಯೂಯಾರ್ಕ್: ಆಧುನಿಕ ವಿಶ್ವ ಟೆನಿಸ್ ನ ಹೆಸರಾಂತ ಆಟಗಾರ ರೋಜರ್ ಫೆಡರರ್
ತಮ್ಮ 18ನೇ ಗ್ರಾಂಡ್ ಸ್ಲಾಮ್ ಪ್ರಶಸ್ತಿಗಾಗಿ ಭಾನುವಾರ (ಮಳೆ ಬಾರದಿದ್ದರೆ)
ನಡೆಯಲಿರುವ ಯುಎಸ್ ಓಪನ್ ಟೆನಿಸ್ ಪಂದ್ಯಾವಳಿಯ ಪ್ರಶಸ್ತಿ ಸುತ್ತಿನಲ್ಲಿ ಜಗತ್ತಿನ ನಂ. 1 ಆಟಗಾರ ನೊವಾಕ್ ಜೊಕೊವಿಚ್ ಜತೆಗೆ ಸೆಣಸಲಿದ್ದಾರೆ.
ಪುರುಷರ ಸಿಂಗಲ್ಸ್ ವಿಭಾಗದ ಸೆಮಿ ಫೈನಲ್ ನಲ್ಲಿ ವಿಶ್ವದ ಎರಡನೇ ಶ್ರೇಯಾಂಕಿತ ರೋಜರ್ ಫೆಡರರ್ ತಮ್ಮೂರಿನವರೇ ಆದ ಸ್ಟಾನಿಸ್ಲಾಸ್ ವಾವ್ರಿಂಕಾ ವಿರುದ್ಧ 6-4, 6-3, 6-1 ನೇರ ಸೆಟ್‍ಗಳಲ್ಲಿ ಗೆಲುವು ಸಾಧಿಸಿ ಫೈನಲ್ ಗೆ ಅರ್ಹತೆ ಗಿಟ್ಟಿಸಿದರು.
ಅಂದಹಾಗೆ ಪುರುಷರ ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮರಿನ್ ಸಿಲಿಕ್ ವಿರುದ್ಧ ಜೊಕೊವಿಚ್ ಕೂಡ ನೇರ ಸೆಟ್ ಗಳಲ್ಲಿ ಗೆಲುವು ಸಾಧಿಸಿದರು. 6-0, 6-1, 6-2 ಸೆಟ್ ಗಳಲ್ಲಿ ಗೆಲುವು ಪಡೆದ ಜೊಕೊವಿಚ್, ಫೈನಲ್ ಜಿಗಿದರು.
Advertisement