ದಾಖಲೆ ಪ್ರಶಸ್ತಿ ಕೈಚೆಲ್ಲಿದ ಸೆರೆನಾ ಸ್ತಬ್ಧ

ಪ್ರತಿಷ್ಠಿತ ಅಮೆರಿಕ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿನ ಸೆರೆನಾ ವಿಲಿಯಮ್ಸ್ ಅವರ ಗೆಲುವಿನ ನಾಗಾಲೋಟಕ್ಕೆತೆರೆಬೀಳುವುದರೊಂದಿಗೆ...
ವಿಶ್ವದ ನಂ.1 ಆಟಗಾರ್ತಿ ಸೆರೆನಾ ವಿಲಿಯಮ್ಸ್ ಅವರನ್ನು ಸೋಲಿಸಿದ ಸಂಭ್ರಮದಲ್ಲಿ ಇಟಲಿ ಆಟಗಾರ್ತಿ ರೊಬೆರ್ಟಾ ವಿನ್ಸಿ
ವಿಶ್ವದ ನಂ.1 ಆಟಗಾರ್ತಿ ಸೆರೆನಾ ವಿಲಿಯಮ್ಸ್ ಅವರನ್ನು ಸೋಲಿಸಿದ ಸಂಭ್ರಮದಲ್ಲಿ ಇಟಲಿ ಆಟಗಾರ್ತಿ ರೊಬೆರ್ಟಾ ವಿನ್ಸಿ

ಪ್ರತಿಷ್ಠಿತ ಅಮೆರಿಕ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿನ ಸೆರೆನಾ ವಿಲಿಯಮ್ಸ್ ಅವರ ಗೆಲುವಿನ ನಾಗಾಲೋಟಕ್ಕೆ ತೆರೆಬೀಳುವುದರೊಂದಿಗೆ ಒಂದು ವಿಧದಲ್ಲಿ ಟೆನಿಸ್ ಲೋಕವೇ
ಸ್ತಬ್ಧಗೊಂಡಂತೆ ಭಾಸವಾಗಿದೆ. ಗುರುವಾರ ನಡೆಯಬೇಕಿದ್ದ ಮಹಿಳೆಯರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯವು ಮಳೆಯಿಂದಾಗಿ ಶುಕ್ರವಾರಕ್ಕೆ ಮುಂದೂಡಲ್ಪಟ್ಟಿತ್ತು.
ಸಾರ್ವಕಾಲಿಕ ವಿಶ್ವ ಶ್ರೇಷ್ಠ ಟೆನಿಸ್ ಆಟಗಾರ್ತಿಯರ ಪೈಕಿ ಒಬ್ಬರೆನಿಸಿಕೊಂಡ ಸೆರೆನಾ, ಇಟಲಿ ಆಟಗಾರ್ತಿ ಹಾಗೂ ಶ್ರೇಯಾಂಕರಹಿತೆ ರೊಬೆರ್ಟಾ ವಿನ್ಸಿ ಎದುರು 6-2, 4-6,
4-6 ಸೆಟ್‍ಗಳಿಂದ ಸೋಲನುಭವಿಸಿ ಸ್ಟೆಫಿಗ್ರಾಫಿ ಅವರ 22 ಗ್ರಾಂಡ್‍ಸ್ಲಾಮ್ ದಾಖಲೆಯ ಅವಕಾಶವನ್ನೂ ಕೈಚೆಲ್ಲಿದರು.

ಬೇಡಿಕೆ ತಗ್ಗಿಸಿದ ಸೋಲು
ಸೆರೆನಾ ವಿಲಿಯಮ್ಸ್ ತವರಿನ ಅಂಗಣದಲ್ಲೇ ಯುಎಸ್ ಓಪನ್ ಟೆನಿಸ್ ಟೂರ್ನಿಯ ಉಪಾಂತ್ಯ ಪಂದ್ಯದಲ್ಲಿ ಸೋಲನುಭವಿಸಿದ ಹಿನ್ನೆಲೆಯಲ್ಲಿ, ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯಕ್ಕೆ ಟಿಕೆಟ್ ಬೇಡಿಕೆ ಗಣನೀಯವಾಗಿ ಕುಸಿಯಿತು. ಟೂರ್ನಿ ಶುರುವಾಗುವ ಎರಡು ವಾರದ ಮುಂಚೆ 36,433 ರೂಪಾಯಿ ಇದ್ದ ಟಿಕೇಟಿನ ಬೆಲೆ ಸೆರೆನಾ ದಾಖಲೆಯ
ಗ್ರಾಂಡ್‍ಸ್ಲಾಮ್ ಪ್ರಶಸ್ತಿಯತ್ತ ದಿಟ್ಟ ಹೆಜ್ಜೆ ಇಟ್ಟಾಗ 99,363ರೂಪಾಯಿಗೆ ಏರಿತು. ಆದರೆ ಸೆರೆನಾ ನಿರ್ಗಮಿಸಿದ ಬಳಿಕ ಫೈನಲ್‍ಗಾಗಿನ ಟಿಕೇಟಿನ ಬೆಲೆ 33  ಸಾವಿರ ರೂಪಾಯಿಕ್ಕೆ ಕುಸಿಯಿತು ಎಂದು ಆನ್‍ಲೈನ್ ಟಿಕೆಟ್ ಮಾರಾಟದ ಸೀಟ್‍ಗೀಕ್‍ನ ವಿಶ್ಲೇಷಕ ಕ್ರಿಸ್ ಲೇಡನ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com