ನ್ಯೂರ್ಯಾಕ್: ಮೂರು ಗಂಟೆ 20 ನಿಮಿಷಗಳ ಸುದೀರ್ಘ ಹೋರಾಟದಲ್ಲಿ ಸರ್ಬಿಯಾದ ಆಟಗಾರ ನೋವಾಕ್ ಜೋಕೋವಿಕ್ ಸ್ವಿಟ್ಜರ್ಲ್ಯಾಂಡ್ ನ ರೋಜರ್ ಫೆಡರರ್ ರನ್ನು ಮಣಿಸಿ ಯುಎಸ್ ಓಪನ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಭಾನುವಾರ ನಡೆದ ಪ್ರತಿಷ್ಠಿತ ಯುಎಸ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ನ ಫೈನಲ್ ಪಂದ್ಯದಲ್ಲಿ ನೋವಾಕ್ ಜೋಕೋಮಿಕ್ ಅದ್ಭುತ ಪ್ರದರ್ಶನ ನೀಡಿದ ರೋಜರ್ ಫೆಡರರನ್ನು 6-4, 5-7, 6-4, 6-4, ಸೆಟ್ ಗಳಿಂದ ಮಣಿಸಿದ್ದಾರೆ.
ಇದರೊಂದಿಗೆ ನೋವಾಕ್ ಜೋಕೋವಿಕ್ ತಮ್ಮ ವೃತ್ತಿ ಜೀವನದ 10ನೇ ಗ್ರ್ಯಾಂಡ್ ಸ್ಲ್ಯಾಮ್ ಗೆದ್ದಿದ್ದಾರೆ.