5ನೇ ಗ್ರ್ಯಾನ್ ಸ್ಲಾಂ: ಒಟ್ಟಾರೆಯಾಗಿ ಇದು ಸಾನಿಯಾ ಮಿರ್ಜಾ ಅವರ ವೃತ್ತಿಜೀವನದ 5ನೇ ಗ್ರ್ಯಾನ್ ಸ್ಲಾಂ ಪ್ರಶಸ್ತಿ. 2009ರಲ್ಲಿ ಆಸ್ಟ್ರೇಲಿಯನ್ ಓಪನ್‍ನ ಮಿಶ್ರಡಬಲ್ಸ್ ಪ್ರಶಸ್ತಿಗೆ ಭಾಜನರಾಗಿದ್ದ ಅವರು, 2012ರಲ್ಲಿ ಫ್ರೆಂಚ್ ಓಪನ್ ಹಾಗೂ ಕಳೆದ ಬಾರಿ ಯುಎಸ್ ಓಪನ್ ಮಿಶ್ರ ಡಬಲ್ಸ್ ಪ್ರಶಸ್ತಿ ಪಡೆದಿದ್ದರು. ಇನ್ನು, ಈ ವರ್ಷ ಜುಲೈನಲ್ಲಿ ಫ್ರೆಂಚ್ ಓಪನ್ ಮಹಿಳೆಯರ ಡಬಲ್ಸ್ ಪ್ರಶಸ್ತಿ ಗೆದ್ದಿದ್ದ ಅವರು, ಹಾಗೂ ಇದೀಗ ಯುಎಸ್ ಓಪನ್ ಗೆದ್ದಿದ್ದಾರೆ. ಇದಲ್ಲದೆ, ಎಲ್ಲಾ ಮಾದರಿಯ ಗ್ರ್ಯಾನ್ ಸ್ಲಾಂ ಪ್ರಶಸ್ತಿಯನ್ನು ಗಳಿಸಿದ ಹೆಗ್ಗಳಿಕೆಯೂ ಅವರ ಪಾಲಾಗಿದೆ. 13 ವರ್ಷ ವಯಸ್ಸಿನವರಾಗಿದ್ದಾಗ ಸಾನಿಯಾ ಮಿರ್ಜಾ ಅವರು, ವಿಂಬಲ್ಡನ್ ಬಾಲಕಿಯರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಗೆದ್ದಿದ್ದರು.