ಕರಾಚಿ: ಮುಂದಿನ ವರ್ಷ ಫೆಬ್ರವರಿ 4ರಿಂದ 24ರವರೆಗೆ ದೋಹಾದಲ್ಲಿ ನಡೆಯಲಿರುವ ಪಾಕಿಸ್ತಾನ ಸೂಪರ್ ಟಿ20 ಲೀಗ್ (ಪಿಎಸ್ ಎಲ್)ನಲ್ಲಿ ವೆಸ್ಟ್ ಇಂಡೀಸ್‍ನ ದೈತ್ಯ ಬ್ಯಾಟ್ಸ್ ಮನ್ ಕ್ರಿಸ್ ಗೇಯ್ಲ್ ಭಾಗವಹಿಸುವ ಸಾಧ್ಯತೆ ಇದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಹೇಳಿದೆ.
ಪಿಸಿಬಿ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪಿಎಸ್‍ಎಲ್ ಕಾರ್ಯಕಾರಿಣಿ ಅಧ್ಯಕ್ಷ ನಜಾಮ್ ಸೇಥಿ ಮಂಗಳವಾರ ಈ ವಿಚಾರ ತಿಳಿಸಿದರು. ಗೇಯ್ಲ್ ಅವರನ್ನು ಈ ಬಗ್ಗೆ ಸಂಪರ್ಕಿಸಿದ್ದು ಅವರು ಒಪ್ಪಿದ್ದಾರೆಂದು ಅವರು ಹೇಳಿದ್ದಾರೆ.