ಮತ್ತೆ ಮುಗ್ಗರಿಸಿದ ಮೈಸೂರು

ಮಧ್ಯಮ ಕ್ರಮಾಂಕಿತ ಆಟಗಾರ ಚೇತನ್ ವಿಲಿಯಮ್ (43: 26 ಎಸೆತ, 3 ಬೌಂಡರಿ, 3 ಸಿಕ್ಸರ್) ತೋರಿದ ಉಪಯುಕ್ತ ಬ್ಯಾಟಿಂಗ್ ನೆರವಿನೊಂದಿಗೆ ಹುಬ್ಬಳ್ಳಿ ಟೈಗರ್ಸ್...
ಮೈಸೂರು ವಾರಿಯರ್ಸ್
ಮೈಸೂರು ವಾರಿಯರ್ಸ್
ಮೈಸೂರು: ಮಧ್ಯಮ ಕ್ರಮಾಂಕಿತ ಆಟಗಾರ ಚೇತನ್ ವಿಲಿಯಮ್ (43: 26 ಎಸೆತ, 3 ಬೌಂಡರಿ, 3 ಸಿಕ್ಸರ್) ತೋರಿದ ಉಪಯುಕ್ತ ಬ್ಯಾಟಿಂಗ್ ನೆರವಿನೊಂದಿಗೆ ಹುಬ್ಬಳ್ಳಿ ಟೈಗರ್ಸ್ ತಂಡ ಆತಿಥೇಯ ಮೈಸೂರು ವಾರಿಯರ್ಸ್ ವಿರುದ್ಧ 24ರನ್ ಗೆಲುವು ಪಡೆಯಿತು. 
ಶ್ರೀ ಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ನಡೆದ ಕೆಪಿಎಲ್ ಪಂದ್ಯಾವಳಿಯ 23ನೇ ಪಂದ್ಯದಲ್ಲಿ ಗೆಲ್ಲಲು 155 ರನ್ ಗುರಿ ಪಡೆದಿದ್ದ ಹಾಲಿ ಚಾಂಪಿಯನ್ ಮೈಸೂರು ವಾರಿಯರ್ಸ್ ತಂಡ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಕಲೆಹಾಕಿದ್ದು ಕೇವಲ 131 ರನ್ ಗಳನ್ನಷ್ಟೆ. ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಮೈಸೂರು ವಾರಿಯರ್ಸ್ ಸೋಲಿನ ಸುಳಿಗೆ ಸಿಲುಕಿತು. 
ತಂಡದ ಪರ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್‍ಮನ್ ಸಿ.ಎಂ. ಗೌತಮ್ (30: 33 ಎಸೆತ, 4 ಬೌಂಡರಿ) ಹಾಗೂ ಮಧ್ಯಮ ಕ್ರಮಾಂಕದಲ್ಲಿ ಜಗದೀಶ್ ಸುಚಿತ್ (27: 16 ಎಸೆತ, 4 ಬೌಂಡರಿ) ಬಿಟ್ಟರೆ ಮಿಕ್ಕವರು ಸಮರ್ಥ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ವಿಫಲರಾದರು. ಕಿಶೋರ್ ಕಾಮತ್ ಕೇವಲ 12 ರನ್‍ಗಳಿಗೆ 3 ವಿಕೆಟ್ ಪಡೆದು ಮೈಸೂರು ವಾರಿಯರ್ಸ್‍ಗೆ ಮಾರಕರಾದರೆ, ಸಂತೆಬನ್ನೂರು ಅಕ್ಷಯ್ 12ಕ್ಕೆ 2, ಕ್ರಾಂತಿ ಕುಮಾರ್ 15ಕ್ಕೆ 2 ಮತ್ತು ಪ್ರತೀಕ್ ಜೈನ್ 35ಕ್ಕೆ 1 ವಿಕೆಟ್ ಪಡೆದು ಮೈಸೂರು ವಾರಿಯರ್ಸ್ ಅನ್ನು ಕಟ್ಟಿಹಾಕಿದರು. 
ವಿಲಿಯಂ ಆಸರೆ ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ಹುಬ್ಬಳ್ಳಿ ಟೈಗರ್ಸ್, ಮೈಸೂರು ವಾರಿಯರ್ಸ್ ಬೌಲರ್‍ಗಳ ಸಂಘಟಿತ ದಾಳಿಯ ಮಧ್ಯೆಯೂ ಚೇತನ್ ವಿಲಿಯಮ್ ಹಾಗೂ ಆರಂಬಿsಕರಾದ ಮೊಹಮದ್ ಟಾಹ (37) ಮತ್ತು ಕೆ.ಬಿ.ಪವನ್ (36) ಅವರುಗಳ ಬ್ಯಾಟಿಂಗ್ ನೆರವಿನಿಂದ 20 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 155 ರನ್ ಪೇರಿಸುವಲ್ಲಿ ಯಶಸ್ವಿಯಾಯಿತು. ಆನಂದ್ ದೊಡ್ಡಮನಿ (22ಕ್ಕೆ 3), ಕೆ. ಗೌತಮ್ (28ಕ್ಕೆ 2) ಹಾಗೂ ಜಗದೀಶ್ ಸುಚಿತ್ 35ಕ್ಕೆ 1 ವಿಕೆಟ್ ಪಡೆದು ಹುಬ್ಬಳ್ಳಿ ಟೈಗರ್ಸ್ ಅನ್ನು ನಿಯಂತ್ರಿಸಲು ಶ್ರಮಿಸಿದರೂ, 150 ರನ್ ಗಡಿ ದಾಟುವಲ್ಲಿ ಟೈಗರ್ಸ್ ಫಲಪ್ರದವಾಯಿತು. 
ತಂಡದ ಈ ಗೌರವದಾಯಕ ಮೊತ್ತದಲ್ಲಿ ನೆರವು ನೀಡಿದ ಚೇತನ್ ವಿಲಿಯಂ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಸಂಕ್ಷಿಪ್ತ ಸ್ಕೋರ್: ಹುಬ್ಬಳ್ಳಿ ಟೈಗರ್ಸ್ 20 ಓವರ್‍ಗಳಲ್ಲಿ 7 ವಿಕೆಟ್‍ಗೆ 155 (ಮೊಹಮದ್ ತಾಹ 37, ಕೆ.ಬಿ. ಪವನ್ 36, ಚೇತನ್ ವಿಲಿಯಮ್ 43; ಆನಂದ್ ದೊಡ್ಡಮನಿ 22ಕ್ಕೆ 3) ಮೈಸೂರು ವಾರಿಯರ್ಸ್ 20 ಓವರ್‍ಗಳಲ್ಲಿ 20 ಓವರ್ ಗಳಲ್ಲಿ 8 ವಿಕೆಟ್‍ಗೆ 131 (ಸಿ.ಎಂ. ಗೌತಮ್ 30, ಜೆ. ಸುಚಿತ್ 27; ಕಿಶೋರ್ ಕಾಮತ್ 12ಕ್ಕೆ 3) 
ಫಲಿತಾಂಶ: ಹುಬ್ಬಳ್ಳಿ ಟೈಗರ್ಸ್‍ಗೆ 24 ರನ್ ಗೆಲುವು ಪಂದ್ಯಶ್ರೇಷ್ಠ: ಚೇತನ್ ವಿಲಿಯಂ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com