
ಡೇವಿಡ್‍ಸನ್: ಭಾರತದ ಖ್ಯಾತ ಗಾಲ್ಫ್ ಆಟಗಾರ ಅನಿರ್ಬಾನ್ ಲಾಹಿರಿ ಪ್ರಸಕ್ತ ಸ್ಮಾಲ್ ಬಿಸಿನೆಸ್ ಕನ್ವೆಷನ್ ಚಾಂಪಿಯನ್‍ಶಿಪ್‍ನಲ್ಲಿ ಜಂಟಿ 16ನೇ ಸ್ಥಾನ ಪಡೆಯುವ ಮೂಲಕ ಮುಂದಿನ ವರ್ಷ ನಡೆಯಲಿರುವ ಪಿಜಿಎ ಟೂರ್ ಚಾಂಪಿಯನ್‍ಶಿಪ್‍ಗೆ ಅರ್ಹತೆ ಪಡೆದುಕೊಂಡಿದ್ದಾರೆ.
ಕಳೆದ ವಾರ ಹೊಟೇಲ್ ಫಿಟ್ನೆಸ್ ಚಾಂಪಿಯನ್‍ಶಿಪ್‍ನಲ್ಲಿ 6ನೇ ಸ್ಥಾನ ಪಡೆದಿದ್ದ ಲಾಹಿರಿ, ಈ ಟೂರ್ನಿಯ ಮೊದಲ ಸುತ್ತಿನಲ್ಲಿ 71ನೇ ಸ್ಥಾನ ದಿಂದ ಆರಂಭಿಸಿದ್ದರು. ನಂತರ ಎರಡನೇ ಸುತ್ತಿನಲ್ಲಿ ಜಂಟಿ 44ನೇ ಸ್ಥಾನ ಪಡೆದರೆ, ಮೂರನೇ ಸುತ್ತಿನಲ್ಲಿ ಜಂಟಿ 20ನೇ ಸ್ಥಾನಕ್ಕೇರಿದ್ದರು. ಅಂತಿಮ ದಿನವಾದ ಸೋಮವಾರವೂ ಉತ್ತಮ ಪ್ರದರ್ಶನ ನೀಡುವ ಮೂಲಕ ನಾಲ್ಕು ಸ್ಥಾನ ಬಡ್ತಿ ಪಡೆದು 16ನೇ ಸ್ಥಾನ ಪಡೆದಿದ್ದಾರೆ. ಮುಂದಿನ ಎರಡು ವಾರಗಳಲ್ಲಿ ನಡೆಯಲಿರುವ ಸ್ಪರ್ಧೆಗಳ ನಂತರ ಲಾಹಿರಿ ಅಧಿಕೃತವಾಗಿ ಪಿಜಿಎ ಟೂರ್ ಚಾಂಪಿಯನ್‍ಶಿಪ್‍ಗೆ ಪ್ರವೇಶ ಪಡೆಯಲಿದ್ದಾರೆ.
Advertisement