ವಿಶಾಲ್ ಕುಮಾರ್, ಸೌಜನ್ಯ ಶ್ರೇಷ್ಠ ಅಥ್ಲೀಟ್

ಕಳೆದ ಮೂರು ದಿನಗಳಿಂದ ಉದ್ಯಾನನಗರಿಯಲ್ಲಿ ನಡೆದ 51ನೇ ಬೆಂಗಳೂರು ವಿಶ್ವವಿದ್ಯಾಲಯ ಅಂತರ ಕಾಲೇಜು ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್‍ನಲ್ಲಿ...
ವಿಶಾಲ್ ಕುಮಾರ್, ಸೌಜನ್ಯ
ವಿಶಾಲ್ ಕುಮಾರ್, ಸೌಜನ್ಯ
ಬೆಂಗಳೂರು: ಕಳೆದ ಮೂರು ದಿನಗಳಿಂದ ಉದ್ಯಾನನಗರಿಯಲ್ಲಿ ನಡೆದ 51ನೇ ಬೆಂಗಳೂರು ವಿಶ್ವವಿದ್ಯಾಲಯ ಅಂತರ ಕಾಲೇಜು ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್‍ನಲ್ಲಿ ಪುರುಷರ ವಿಭಾಗದಲ್ಲಿ ಸಂತ ಜೋಸೆಫ್ ವಾಣಿಜ್ಯ ಕಾಲೇಜಿನ ಪಿ. ವಿಶಾಲ್ ಕುಮಾರ್ ಹಾಗೂ ಮಹಿಳೆಯರ ವಿಭಾಗದಲ್ಲಿ ಶ್ರೀಗಂಧಕಾವಲ್‍ನ ಕೆಐಎಂಎಸ್‍ಆರ್‍ನ ಜಿ.ಕೆ. ವಿಜಯಕುಮಾರಿ ಶ್ರೇಷ್ಠ ಅಥ್ಲೀಟ್‍ಗಳೆನಿಸಿದರು. 
ಅಂತೆಯೇ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ಕ್ರಮವಾಗಿ ಅಲ್ ಅಮೀನ್ ಹಾಗೂ ಜ್ಯೋತಿ ನಿವಾಸ್ ಕಾಲೇಜು ಸಮಗ್ರ ಚಾಂಪಿಯನ್‍ಶಿಪ್ ಪಡೆದವು. ಇನ್ನು ಕೂಟದ ಕೊನೇ ದಿನವಾದ ಬುಧವಾರದಂದು ನಡೆದ ಸ್ಪರ್ಧೆಯಲ್ಲಿ ಬಿಷಪ್ ಕಾಟನ್ ಮಹಿಳಾ ಕಾಲೇಜಿನ ಜಿ. ಸೌಜನ್ಯಾ ಕೂಟ ದಾಖಲೆ ನಿರ್ಮಿಸಿ ಚಿನ್ನದ ಪದಕ ಗೆದ್ದರು. ಕೂಟದ ಕೊನೆಯ ದಿನವಾದ ಬುಧವಾರ ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಮಹಿಳೆಯರ 100 ಮೀ. ಓಟದಲ್ಲಿ ಸೌಜನ್ಯಾ 12.1 ಸೆ.ಗಳಲ್ಲಿ ಗುರಿ ಮುಟ್ಟಿ ಸ್ವರ್ಣ ಪದಕ ಪಡೆದರು. 
ಈ ಮೂಲಕ 1971ರಲ್ಲಿ ನಿರ್ಮಲ ಉತ್ತಯ್ಯ (12.10 ಸೆ.) ಅವರ ದಾಖಲೆಯನ್ನು ಹಿಂದಿಕ್ಕಿದರು. ಸೆಂಟ್ ಜೋಸೆಫ್ ಕಾಲೇಜ್ ಆಫ್ ಕಾಮರ್ಸ್‍ನ ಮೇಘನಾ ಶೆಟ್ಟಿ (13.3 ಸೆ.) ಬೆಳ್ಳಿ ಪದಕ ಪಡೆದರೆ, ಓಂಪ್ರಿಯಾ(14.2 ಸೆ.) ಕಂಚಿನ ಪದಕ ಜಯಿಸಿದರು. ಪುರುಷರ 100 ಮೀ. ಓಟದಲ್ಲಿ ಸೆಂಟ್ ಜೋಸೆಫ್ ಕಾಲೇಜ್ ಆಫ್ ಕಾಮರ್ಸ್‍ನ ಪಿ. ವಿಶಾಲ್ ಕುಮಾರ್ ಜೈನ್ (10.7 ಸೆ.) ಚಿನ್ನದ ಪದಕ ಪಡೆದರೆ, ನ್ಯಾಷನಲ್ ಕಾಲೇಜು ಜಯನಗರದ ಸಚಿನ್ ಬಿ.ಬಿ (11.0 ಸೆ.) ಮತ್ತು ಜಿಎಫ್ ಜಿಸಿನ ಚೆನ್ನಕೇಶವ್ (11.3 ಸೆ.) ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಪಡೆದರು. ಅಂತಿಮ ದಿನದ ಫಲಿತಾಂಶಗಳು (ಚಿನ್ನ ಪಡೆದವರು): 
ಪುರುಷರ ವಿಭಾಗ: 400 ಮೀ. ಹರ್ಡಲ್ಸ್: ಆದರ್ಶ ಹೆಗಡೆ (1:00.5 ಸೆ.), 3000 ಮೀ. ಸ್ಟೀಪಲ್ ಚೇಸ್: ಕೀರ್ತಿ ಕುಮಾರ್ ಜಿ.ಆರ್ (11:36.0 ನಿ.), ಹಾಫ್ ಮ್ಯಾರಥಾನ್: ಗೋವಿಂದ ಸೋಲಂಕಿ (1:20:16.9 ಸೆ.), 20 ಕಿ.ಮೀ ವಾಕ್: ಜೋವಿನ್ ಜೆರೋಮ್ ಫರ್ನಾಂಡೀಸ್ (2:16:18.0 ಸೆ.), ತ್ರಿಪ್ಪಲ್ ಜಂಪ್: ಸೂರಜ್ ಮಂದಲ್ (13.35ಮೀ.), ಶಾಟ್‍ಪುಟ್: ರಾಹುಲ್ ಘೋರಾಯ್ (12.75 ಮೀ.), ಪೌಲ್ ವಾಲ್ಟ್: ಶಶಿಕಾಂತಿ (2.50 ಮೀ.), ಡೆಕಥ್ಲಾನ್: ಮಹೇಂದ್ರ ಐ.ಎನ್ (3993 ಅಂಕ), 4/400 ಮೀ. ರಿಲೇ: ಅಲ್ ಅಮೀನ್ ಕಾಲೇಜು (3:33.4 ಸೆ.)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com