
ನವದೆಹಲಿ: ಪ್ರಸಕ್ತ ಸಾಲಿನಲ್ಲಿ ಅತ್ಯುತ್ತಮ ಯಶಸ್ಸು ಕಂಡಿರುವ ಭರವಸೆಯ ಗಾಲ್ಫ್ ಆಟಗಾರ ಅನಿರ್ಬಾನ್ ಲಾಹಿರಿ, ವೆಬ್ ಡಾಟ್ ಕಾಮ್ ಫೈನಲ್ ಸೀರೀಸ್‍ನ ಅಂತಿಮ ಎರಡು ಸ್ಪರ್ಧೆಗಳಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ.
ಪಿಜಿಎ ಟೂರ್ ಸ್ಪರ್ಧೆಗೆ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾದ ನಂತರ ಲಾಹಿರಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಆರಂಭಿಕ ಎರಡು ಸ್ಪರ್ಧೆಗಳಲ್ಲಿ ಕ್ರಮವಾಗಿ ಜಂಟಿ 6ನೇ ಹಾಗೂ 16ನೇ ಸ್ಥಾನ ಪಡೆದಿದ್ದ ಲಾಹಿರಿ, ರು. 32.86 ಲಕ್ಷ ಬಹುಮಾನ ಮೊತ್ತ ಗೆದ್ದುಕೊಂಡಿದ್ದಾರೆ. ಆ ಮೂಲಕ ಟೂರ್ನಿಯಲ್ಲಿ ಅಗ್ರ 25ರಲ್ಲಿ ಕಾಣಿಸಿಕೊಂಡು ಪಿಜಿಎ ಚಾಂಪಿಯನ್‍ಶಿಪ್‍ಗೆ ಅರ್ಹತೆ ಪಡೆದುಕೊಂಡಿದ್ದಾರೆ.
Advertisement