
ಕರಾಚಿ: ಇದೇ ವರ್ಷ ಡಿಸೆಂಬರ್‍ನಲ್ಲಿ ನಡೆಯಬೇಕಿರುವ ಪಾಕಿಸ್ತಾನ ವಿರುದ್ಧದ ಕ್ರಿಕೆಟ್ ಸರಣಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧಿಕೃತವಾಗಿ ನಿರಾಕರಿಸಿದರೆ,
ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಮತ್ತು ಏಷ್ಯಾ ಕ್ರಿಕೆಟ್ ಸಂಸ್ಥೆಗಳ ಸರಣಿಗಳನ್ನು ಬಹಿಷ್ಕರಿಸುವುದಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಶಹರ್ಯಾರ್ ಖಾನ್ ಬೆದರಿಕೆ ಒಡ್ಡಿದ್ದಾರೆ.
ಸರಣಿ ಕುರಿತಂತೆ ಸಂಬಂಧಪಟ್ಟ ಸಚಿವಾಲಯದ ಅನುಮತಿ ಪಡೆಯುವ ಪ್ರಯತ್ನ ನಡೆಸಿಲ್ಲ. ಬಿಸಿಸಿಐ ಸರಣಿಯಿಂದ ಅಧಿಕೃತವಾಗಿ ಹಿಂದೆ ಸರಿದರೆ ನಾವು ಐಸಿಸಿ ಮತ್ತು ಎಸಿಸಿಯ ಕ್ರಿಕೆಟ್ ಟೂರ್ನಿಗಳನ್ನು ಬಹಿಷ್ಕರಿಸುವ ಅವಕಾಶವನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
Advertisement