ಬಾಕ್ಸರ್ ಸರಿತಾದೇವಿ ಮೇಲಿದ್ದ ನಿಷೇಧ ಅಂತ್ಯ

ತಮ್ಮ ಮೇಲೆ ಒಂದು ವರ್ಷ ನಿಷೇಧ ಪೂರೈಸಿದ ಬಳಿಕ ಮತ್ತಷ್ಟು ಪ್ರಭುದ್ಧ ಹಾಗೂ ನಿಶ್ಚಲ ವ್ಯಕ್ತಿಯಾಗಿದ್ದೇನೆ ಎಂದು ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆಯಿಂದ ಶಿಕ್ಷೆಗೆ ಗುರಿಯಾಗಿದ್ದ ...
ಸರಿತಾ ದೇವಿ
ಸರಿತಾ ದೇವಿ

ತಮ್ಮ ಮೇಲೆ ಒಂದು ವರ್ಷ ನಿಷೇಧ ಪೂರೈಸಿದ ಬಳಿಕ ಮತ್ತಷ್ಟು ಪ್ರಭುದ್ಧ ಹಾಗೂ ನಿಶ್ಚಲ ವ್ಯಕ್ತಿಯಾಗಿದ್ದೇನೆ ಎಂದು ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆಯಿಂದ ಶಿಕ್ಷೆಗೆ ಗುರಿಯಾಗಿದ್ದ ಭಾರತದ ಬಾಕ್ಸರ್ ಸರಿತಾ ದೇವಿ ಹೇಳಿದ್ದಾರೆ.

ಕಳೆದ ವರ್ಷ ನಡೆದ ಏಷ್ಯನ್ ಗೇಮ್ಸ್ ಕೂಟದಲ್ಲಿ ವಿವಾದಾತ್ಮಕ ಸೆಮಿಫೈನಲ್ ಪಂದ್ಯದಲ್ಲಿ ಪರಾಭವಗೊಂಡ ಸರಿತಾದೇವಿ, ಕಂಚಿನ ಪದಕ ಸ್ವೀಕರಿಸುವ ವೇಳೆ ಅನುಚಿತವಾಗಿ ವರ್ತಿಸಿದ ಕಾರಣ ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ (ಎಐಬಿಎ)ಯಿಂದ ಒಂದು ವರ್ಷದ ನಿಷೇಧಕ್ಕೆ ಒಳಗಾಗಿದ್ದರು. ಇದೀಗ ಅವರ ಮೇಲಿನ ನಿಷೇಧ ಅ.1 ಕ್ಕೆ ಅಂತ್ಯವಾಗಲಿದೆ.

ಬೆಳ್ಳಿ ಪದಕ ಜಯಿಸಿದ್ದ ದಕ್ಷಿಣ ಕೊರಿಯಾದ ಪಾರ್ಕ್ ಜಿ ನಾ ಅವರಿಗೆ ಕಂಚಿನ ಪದಕವಿತ್ತು ಕಣ್ಣೀರು ಸುರಿಸುತ್ತಾ ಭಾವೋದ್ವೇಗದಿಂದ ಹೊರ ನಡೆದಿದ್ದರು. ಅದಾಗ್ಯೂ ಸರಿತಾ ದೇವಿ ವಿರುದ್ಧ ಅ. 1 2014ರಿಂದ ಅ. 1 2015ರ ವರೆಗೆ ಬಾಕ್ಸಿಂಗ್‌ನಿಂದ ನಿಷೇಧ ಹೇರುವ ಜತೆಗೆ ಒಂದು ಸಾವಿರ ಸ್ವಿಸ್ ಫ್ರಾನ್ಸಸ್ ದಂಡ ಹಾಕಲಾಗಿತ್ತು.

ಈಗ ಮತ್ತಷ್ಟು ಪ್ರಭುದ್ಧ ಬಾಕ್ಸರ್ ಆಗಿದ್ದೇನೆ, ಕಳೆದ 15 ವರ್ಷಗಳಿಂದ ನಾನು ಬಾಕ್ಸರ್ ಆಗಿದ್ದೆ, ಸುಧಾರಣೆ ಮಾಡಿಕೊಳ್ಳುವುದು ಇನ್ನೂ ಸಾಕಷ್ಟಿದೆ. ಹೀಗಾಗಿ ಕಲಿಯುವುದನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ. ಜತೆಗೆ ''ಶಿಕ್ಷೆ ನನ್ನನ್ನು ಮತ್ತಷ್ಟು ಶಾಂತ ಚಿತ್ತಳಾಗುವಂತೆ ಮಾಡಿದೆ,  ಮುಂಬರುವ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಜತೆಗೆ ದೇಶಕ್ಕೆ ಚಿನ್ನ ಗೆದ್ದು ಕೊಡುವುದು ನನ್ನ ಮುಂದಿನ ಗುರಿಯಾಗಿದೆ ಎಂದಿದ್ದಾರೆ. ಒಟ್ಟಾರೆ ಮಾನಸಿಕ ಮತ್ತು ದೈಹಿಕವಾಗಿ ಈ ಹಿಂದಿಗಿಂತಲೂ ಈಗ ಪ್ರಭುದ್ಧಳಾಗಿದ್ದೇನೆ, ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com