ಶಹರ್ಯಾರ್ ಖಾನ್
ಕ್ರೀಡೆ
ಕ್ರಿಕೆಟ್, ರಾಜಕೀಯವನ್ನು ಒಂದೇ ತಕ್ಕಡಿಯಲ್ಲಿ ತೂಗಬೇಡಿ: ಶಹರ್ಯಾರ್ ಖಾನ್
ಉಗ್ರ ಭೀತಿಯಿಂದಾಗಿ ನನೆಗುಂದಿಗೆ ಬಿದ್ದಿರುವ ಪಾಕಿಸ್ತಾನ-ಭಾರತ ನಡುವಿನ ಟೂರ್ನಿಯನ್ನು ನಡೆಸಬೇಕು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಿಳಿ(ಪಿಸಿಬಿ) ಅಧ್ಯಕ್ಷ...
ಕೊಲ್ಕತಾ: ಉಗ್ರ ಭೀತಿಯಿಂದಾಗಿ ನನೆಗುಂದಿಗೆ ಬಿದ್ದಿರುವ ಪಾಕಿಸ್ತಾನ-ಭಾರತ ನಡುವಿನ ಟೂರ್ನಿಯನ್ನು ನಡೆಸಬೇಕು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಿಳಿ(ಪಿಸಿಬಿ) ಅಧ್ಯಕ್ಷ ಶಹರ್ಯಾರ್ ಖಾನ್ ಹೇಳಿದ್ದು, ಕ್ರಿಕೆಟ್ ಮತ್ತು ರಾಜಕೀಯವನ್ನು ಒಂದೇ ತಕ್ಕಡಿಯಲ್ಲಿ ತೂಗಬೇಡಿ ಎಂದು ಹೇಳಿದ್ದಾರೆ.
ಭಾರತ-ಪಾಕಿಸ್ತಾನದ ನಡುವಣ ಕ್ರಿಕೆಟ್ ಟೂರ್ನಿಯನ್ನು ನಡೆಸುವ ಮೂಲಕ ಪಾಕಿಸ್ತಾನ ಕ್ರಿಕೆಟ್ ಮಂಡಿಳಿಗೆ ಪುನರ್ಚೇತನ ನೀಡುವ ಉದ್ದೇಶದೊಂದಿಗೆ ಶಹರ್ಯಾರ್ ಖಾನ್ ಇನ್ನಿಲ್ಲದ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಕ್ರಿಕೆಟ್ ಎನ್ನುವುದು ಪ್ರಜೆಗಳ ಭಾವನೆಗೆ ಸಂಬಂಧಿಸಿದ್ದು, ಹೀಗಾಗಿ ರಾಜಕೀಯ ಮತ್ತು ಕ್ರಿಕೆಟ್ ಎರಡನ್ನೂ ಪ್ರತ್ಯೇಕವಾಗಿ ನೋಡಿ ಎಂದು ಹೇಳಿದ್ದಾರೆ.
ಪಾಕಿಸ್ತಾನ ಎಂದಿಗೂ ಭಯೋತ್ಪಾದನೆಯನ್ನು ಬೆಂಬಸುವುದಿಲ್ಲ. ಭಯೋತ್ಪಾದನೆಯಿಂದ ಪಾಕಿಸ್ತಾನಕ್ಕೆ ಸಾಕಷ್ಟು ತೊಂದರೆಯಾಗಿದೆ. ಭಯೋತ್ಪಾದನೆಯಿಂದ ಭಾರತಕ್ಕಿಂತಲೂ ಪಾಕಿಸ್ತಾನ ಹೆಚ್ಚು ನಲುಗಿ ಹೋಗುತ್ತಿದೆ ಎಂದು ಹೇಳಿದ್ದಾರೆ.
ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಕೂಡ ಭಾರತ-ಪಾಕಿಸ್ತಾನ ಕ್ರಿಕೆಟ್ ಟೂರ್ನಿ ನಡೆಯುತ್ತದೆ ಎಂದು ಹೇಳಿದ್ದಾರೆ. ಟೂರ್ನಿ ಕುರಿತಂತೆ ಐಸಿಸಿಯಲ್ಲಿ ಸಭೆಯಲ್ಲಿ ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ನಡೆಸುವ ಭರವಸೆ ನೀಡಿದ್ದು, ಬಿಸಿಸಿಐ ಇನ್ನಷ್ಟೇ ಸ್ಪಷ್ಟನೆ ನೀಡಬೇಕಿದೆ ಎಂದರು.
ಬಿಸಿಸಿಐನಿಂದ ಕ್ರಿಕೆಟ್ ಟೂರ್ನಿ ನಡೆಸಲು ಸಮ್ಮತಿಸಿದರೆ 2016ರಲ್ಲಿ ಟೂರ್ನಿಯನ್ನು ನಡೆಸಲು ಯೋಜನೆ ರೂಪಿಸಲಾಗುವುದು ಎಂದು ಶಹರ್ಯಾರ್ ಖಾನ್ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ