ಒಲಂಪಿಕ್ ಗೆ ಆಯ್ಕೆಯಾದ ಭಾರತದ ಮೊದಲ ಮಹಿಳಾ ಜಿಮ್ನಾಸ್ಟ್ ದೀಪಾ ಕರ್ಮಕರ್

ಒಲಂಪಿಕ್ ಗೆ ಆಯ್ಕೆಯಾದ ಮೊದಲ ಭಾರತೀಯ ಮಹಿಳಾ ಜಿಮ್ನಾಸ್ಟ್ (ವ್ಯಾಯಾಮಪಟು) ಎಂಬ ಪ್ರಶಂಸೆಗೆ ದೀಪಾ ಕರ್ಮಕಾರ್...
ದೀಪಾ ಕರ್ಮಕರ್
ದೀಪಾ ಕರ್ಮಕರ್

ರಿಯೋ ಡಿ ಜನೈರೋ: ಒಲಂಪಿಕ್ ಗೆ ಆಯ್ಕೆಯಾದ ಮೊದಲ ಭಾರತೀಯ ಮಹಿಳಾ ಜಿಮ್ನಾಸ್ಟ್ (ವ್ಯಾಯಾಮಪಟು) ಎಂಬ ಪ್ರಶಂಸೆಗೆ ದೀಪಾ ಕರ್ಮಕಾರ್ ಪಾತ್ರರಾಗಿದ್ದಾರೆ. ಒಲಂಪಿಕ್ ಗೇಮ್ ಗೆ ಅರ್ಹತೆ ಪಡೆಯಲು ನಡೆಸಿದ ಅಂತಿಮ ಅರ್ಹತಾ ಪರೀಕ್ಷೆಯಲ್ಲಿ ದೀಪಾ ಉತ್ತಮ ಸಾಧನೆ ತೋರಿಸಿದ್ದಾರೆ.

ತ್ರಿಪುರಾ ಮೂಲದ 22 ವರ್ಷ ಹರೆಯದ ದೀಪಾ ಕರ್ಮಕರ್ ಒಲಂಪಿಕ್ಸ್ ಗೆ ನಡೆದ ಅರ್ಹತಾ ಪಂದ್ಯದಲ್ಲಿ 52.698 ಅಂಕ ಗಳಿಸಿದ್ದಾರೆ. ಮುಂದಿನ ಆಗಸ್ಟ್ ನಲ್ಲಿ ನಡೆಯುವ ರಿಯೋ ಒಲಂಪಿಕ್ ಪಂದ್ಯದಲ್ಲಿ ಅವರು ಭಾಗವಹಿಸಲಿದ್ದಾರೆ. ಜಿಮ್ನಾಸ್ಟಿಕ್ ಗೆ ಆಯ್ಕೆಯಾದ ಮೊದಲ ಭಾರತೀಯ ಮಹಿಳೆಯಾಗಿ ದೀಪಾ ಇತಿಹಾಸ ನಿರ್ಮಿಸಿರುವುದಲ್ಲದೆ 52 ವರ್ಷಗಳ ಬಳಿಕ ಭಾರತೀಯ ಜಿಮ್ನಾಸ್ಟ್ ವೊಬ್ಬರು ಒಲಂಪಿಕ್ ಗೆ ಆಯ್ಕೆಯಾಗಿದ್ದಾರೆ. ಭಾರತಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಒಲಂಪಿಕ್ಸ್ ನಲ್ಲಿ 11 ಭಾರತೀಯ ಪುರುಷ ಜಿಮ್ನಾಸ್ಟ್ ಗಳು ಭಾಗವಹಿಸಿದ್ದರು.

ದೀಪಾ ಅವರು 2016ನೇ ಸಾಲಿನ ರಿಯೋ ಒಲಂಪಿಕ್ಸ್ ನಲ್ಲಿ ಭಾಗವಹಿಸುವುದನ್ನು ಅಂತಾರಾಷ್ಟ್ರೀಯ ಜಿಮ್ನಾಸ್ಟಿಕ್ಸ್ ಫೆಡರೇಶನ್ ಅಧಿಕೃತವಾಗಿ ದೃಢಪಡಿಸಿದೆ. ಒಲಂಪಿಕ್ಸ್ ನಲ್ಲಿ ಭಾಗವಹಿಸುತ್ತಿರುವ ವಿಶ್ವದ ಮಹಿಳಾ ಜಿಮ್ನಾಸ್ಟಿಕ್ ಗಳ ವೈಯಕ್ತಿಕ ವಿಭಾಗದಲ್ಲಿ 79ನೆಯವರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com