ಬೆಂಗಳೂರು ಎಫ್ ಸಿ
ಕ್ರೀಡೆ
ಬೆಂಗಳೂರು ಎಫ್ ಸಿ ಐ-ಲೀಗ್ ಚಾಂಪಿಯನ್
ಫೈನಲ್ ನಲ್ಲಿ ಸಲ್ಗಾಂವ್ಕರ್ ವಿರುದ್ಧ ಗೆಲವು ಸಾಧಿಸುವ ಮೂಲಕ ಎರಡನೇ ಬಾರಿಗೆ ಬೆಂಗಳೂರು ಎಫ್ ಸಿ ತಂಡ ಪ್ರತಿಷ್ಠಿತ ಐ-ಲೀಗ್ ಚಾಂಪಿಯನ್ ಎನಿಸಿಕೊಂಡಿದ್ದಾರೆ...
ಬೆಂಗಳೂರು: ಫೈನಲ್ ನಲ್ಲಿ ಸಲ್ಗಾಂವ್ಕರ್ ವಿರುದ್ಧ ಗೆಲವು ಸಾಧಿಸುವ ಮೂಲಕ ಎರಡನೇ ಬಾರಿಗೆ ಬೆಂಗಳೂರು ಎಫ್ ಸಿ ತಂಡ ಪ್ರತಿಷ್ಠಿತ ಐ-ಲೀಗ್ ಚಾಂಪಿಯನ್ ಎನಿಸಿಕೊಂಡಿದ್ದಾರೆ.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸುನೀಲ್ ಛೆಟ್ರಿ ಸಾರಥ್ಯದ ಬಿಎಫ್ ಸಿ 2-0 ಗೋಲಿನಿಂದ ರೋಚಕ ಗೆಲುವು ಸಾಧಿಸಿತು.
ಪಂದ್ಯದ ಮೊದಲಾರ್ಧದಲ್ಲಿ ಯುಗೆನ್ಸನ್ ಲಿಂಗ್ಡೊ ಗೋಲು ಹೊಡೆದರೆ, ಪಂದ್ಯ ಮುಗಿಯುವ ಕೊನೇ ಹಂತದಲ್ಲಿ ಸ್ಟ್ರೈಕರ್ ಸೆಮಿಸ್ಲೆನ್ ಡೌಂಗೆಲ್(87 ನೇ.ನಿ) ಗೋಲು ದಾಖಲಿಸಿದರು.
2014ರಲ್ಲಿ ಮೊದಲ ಬಾರಿಗೆ ಐ-ಲೀಗ್ ಟ್ರೋಫಿ ಜಯಿಸಿದ್ದ ಬಿಎಫ್ ಸಿ ಇದೀಗ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ