ಒಲಂಪಿಕ್ಸ್ ಉಗಮ ಸ್ಥಳ ಗ್ರೀಸ್‌ನಲ್ಲಿ ಬೆಳಗಿದ ಒಲಿಂಪಿಕ್ಸ್ ಜ್ಯೋತಿ

ಒಲಿಂಪಿಕ್ಸ್ ಉಗಮಸ್ಥಳ ದಕ್ಷಿಣ ಗ್ರೀಸ್‌ನ ಒಲಿಂಪಿಯಾದಲ್ಲಿ ರಿಯೋ ಒಲಿಂಪಿಕ್ಸ್‌ನ ಕ್ರೀಡಾಜ್ಯೋತಿಯನ್ನು ಬೆಳಗಿಸಲಾಯಿತು. ಇದರೊಂದಿಗೆ ರಿಯೋ ಕೂಟಕ್ಕೆ...
ಒಲಿಂಪಿಕ್ಸ್ ಜ್ಯೋತಿ
ಒಲಿಂಪಿಕ್ಸ್ ಜ್ಯೋತಿ

ಒಲಿಂಪಿಯಾ(ಗ್ರೀಸ್): ಒಲಿಂಪಿಕ್ಸ್ ಉಗಮಸ್ಥಳ ದಕ್ಷಿಣ ಗ್ರೀಸ್‌ನ ಒಲಿಂಪಿಯಾದಲ್ಲಿ ರಿಯೋ ಒಲಿಂಪಿಕ್ಸ್‌ನ ಕ್ರೀಡಾಜ್ಯೋತಿಯನ್ನು ಬೆಳಗಿಸಲಾಯಿತು. ಇದರೊಂದಿಗೆ ರಿಯೋ ಕೂಟಕ್ಕೆ ಅಧಿಕೃತ ದಿನಗಣನೆ ಆರಂಭವಾಗಿದೆ.

ಸೂರ್ಯನ ಕಿರಣಗಳ ನೆರವಿನಿಂದ ಗ್ರೀಸ್ ದೇಶದ ಖ್ಯಾತ ನಟಿ 48 ವರ್ಷದ ಕ್ಯಾಥರಿನಾ ಲೆಹೋ ಕ್ರೀಡಾಜ್ಯೋತಿಯನ್ನು ಬೆಳಗಿಸಿದರು. ಟೆಂಪಲ್ ಆಫ್ ಹೆರಾದಲ್ಲಿ ನಡೆದ ಸಮಾರಂಭದಲ್ಲಿ ನಟಿ ಲೆಹೋ, ಗ್ರೀಕ್ ಆರಾಧನೆಯ ಸೂರ್ಯದೇವ ಅಪೋಲೋಗೆ ಪ್ರಾರ್ಥನೆ ಸಲ್ಲಿಸಿ ಕ್ರೀಡಾಜ್ಯೋತಿಯನ್ನು ಬೆಳಗಿಸಿದರು.

ಒಲಿಂಪಿಕ್ಸ್ ಕ್ರೀಡಾಜ್ಯೋತಿಯನ್ನು ಪುರಾತನ ಗೇಮ್ಸ್ ಆಯೋಜಿಸಿದ್ದ ಗ್ರೀಸ್‌ನಿಂದ ತರಲಾಗುತ್ತದೆ. ಗ್ರೀಕ್‌ನ ಜಿಮ್ನಾಸ್ಟ್ ಎಲೆಟ್‌ಥಿಯೋರಿಸ್ ಪೆಟ್ರೌನಿಯಾಸ್, ರಿಯೋ ಒಲಿಂಪಿಕ್ಸ್ ಕ್ರೀಡಾಜ್ಯೋತಿ ಹಿಡಿದ ಮೊದಲ ಅಥ್ಲೀಟ್ ಎನಿಸಿಕೊಂಡರು. ಮೊಟ್ಟಮೊದಲ ಆಧುನಿಕ ಒಲಿಂಪಿಕ್ಸ್ ನಡೆದ ಅಥೇನ್ಸ್‌ನಲ್ಲಿರುವ ಪ್ಯಾಂಥೇನಿಯನ್ ಸ್ಟೇಡಿಯಂನಲ್ಲಿ ಏಪ್ರಿಲ್ 27 ರಂದು ನಡೆಯುವ ಸಮಾರಂಭದಲ್ಲಿ ಜ್ಯೋತಿಯನ್ನು ರಿಯೋ ಒಲಿಂಪಿಕ್ಸ್ ಸಂಘಟಕರಿಗೆ ಹಸ್ತಾಂತರ ಮಾಡಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com