ರಿಯೋ ಒಲಂಪಿಕ್ಸ್ ನಲ್ಲಿ ಪದಕ ಗಳಿಸಲು ಕಠಿಣ ತರಬೇತಿ ನಡೆಸುವೆ: ದೀಪಾ ಕರ್ಮಾಕರ್

ಒಲಂಪಿಕ್ಸ್ ಕ್ರೀಡೆಗಳ ಜಿಮ್ಯಾಸ್ಟಿಕ್ಸ್ ಗೆ ಆಯ್ಕೆಯಾಗಿರುವ ಮೊದಲ ಭಾರತೀಯ ಮಹಿಳಾ ಅಭ್ಯರ್ಥಿ ದೀಪಾ ಕರ್ಮಾಕರ್ ಮುಂಬರುವ ರಿಯೋ ಒಲಂಪಿಕ್ಸ್ ನಲ್ಲಿ ಪದಕ ಗೆಲ್ಲಲು ಕಠಿಣ
ಒಲಂಪಿಕ್ಸ್ ಕ್ರೀಡೆಗಳ ಜಿಮ್ಯಾಸ್ಟಿಕ್ಸ್ ಗೆ ಆಯ್ಕೆಯಾಗಿರುವ ಮೊದಲ ಭಾರತೀಯ ಮಹಿಳಾ ಅಭ್ಯರ್ಥಿ ದೀಪಾ ಕರ್ಮಾಕರ್
ಒಲಂಪಿಕ್ಸ್ ಕ್ರೀಡೆಗಳ ಜಿಮ್ಯಾಸ್ಟಿಕ್ಸ್ ಗೆ ಆಯ್ಕೆಯಾಗಿರುವ ಮೊದಲ ಭಾರತೀಯ ಮಹಿಳಾ ಅಭ್ಯರ್ಥಿ ದೀಪಾ ಕರ್ಮಾಕರ್

ಅಗರ್ತಲಾ: ಒಲಂಪಿಕ್ಸ್ ಕ್ರೀಡೆಗಳ ಜಿಮ್ಯಾಸ್ಟಿಕ್ಸ್ ಗೆ ಆಯ್ಕೆಯಾಗಿರುವ ಮೊದಲ ಭಾರತೀಯ ಮಹಿಳಾ ಅಭ್ಯರ್ಥಿ ದೀಪಾ ಕರ್ಮಾಕರ್ ಮುಂಬರುವ ರಿಯೋ ಒಲಂಪಿಕ್ಸ್ ನಲ್ಲಿ ಪದಕ ಗೆಲ್ಲಲು ಕಠಿಣ ತರಬೇತಿ ನಡೆಸುವುದಾಗಿ ಶುಕ್ರವಾರ ಹೇಳಿದ್ದಾರೆ.

ಶುಕ್ರವಾರ ತ್ರಿಪುರಾಗೆ ತಮ್ಮ ತರಬೇತುದಾರ ಬಿಸ್ವೇಶ್ವರ್ ನಂದಿ ಅವರೊಂದಿಗ ಆಗಮಿಸಿದ ದೀಪಾಗೆ ವೈಭವದ ಸ್ವಾಗತ ಕಾಡಿತ್ತು.

"ದೆಹಲಿಯ ತರಬೇತು ಸಂಸ್ಥೆ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಗಂಭೀರ ತರಬೇತಿಯಲ್ಲಿ ತೊಡಗಿಸಿಕೊಳ್ಳುವತ್ತ ಗಮನ ಹರಿಸಲಿದ್ದೇನೆ" ಎಂದು ಅವರು ವರದಿಗಾರರಿಗೆ ತಿಳಿಸಿದ್ದಾರೆ.

"ನನ್ನ ಒಂದೇ ಗುರಿ ರಿಯೋ ಒಲಂಪಿಕ್ಸ್ ನಲ್ಲಿ ಪದಕಗಳನ್ನು ಗೆಲ್ಲುವುದು, ಮತ್ತೇನಿಲ್ಲ. ಒಲಂಪಿಕ್ಸ್ ನಲ್ಲಿ ಅತ್ಯುತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇನೆ" ಎಂದು ದೇಶದ ಇತ್ತೀಚಿನ ನೆಚ್ಚಿನ ಕ್ರೀಡಾ ತಾರೆ ಹೇಳಿದ್ದಾರೆ.

ದೆಹಲಿಯಿಂದ ಅಗರ್ತಲಾ ವಿಮಾನನಿಲ್ದಾಣಕ್ಕೆ ಬಂದಿಳಿದ ದೀಪಾ ಅವರನ್ನು ನೂರಾರು ಕ್ರೀಡಾ ರಸಿಕರು, ಅಧಿಕಾರಿಗಳು, ಅಭಿಮಾನಿಗಳು ಮತ್ತು ಹಿತೈಷಿಗಳು ಸ್ವಾಗತಿಸಿದ್ದಾರೆ.

ದೆಹಲಿಗೆ ಮತ್ತೆ ತರಬೇತಿಗೆ ತೆರಳುವುದಕ್ಕೂ ಮುಂಚಿತವಾಗಿ ಒಂದೆರಡು ದಿನ ಉಳಿಯಲಿರುವ ದೀಪಾ "ಮುಂದಿನ ಒಲಂಪಿಕ್ಸ್ ನಲ್ಲಿ ಚಿನ್ನದ ಪದಕಗಳನ್ನು ಗೆಲ್ಲಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ" ಎಂದಿದ್ದಾರೆ.

ದೀಪಾ ೨೦೧೪ರ ಕಾಮನ್ ವೆಲ್ತ್ ಪಂದ್ಯಗಳಲ್ಲಿ ಪದಕ, ಅದೇ ವರ್ಷದ ಏಶ್ಯನ್ ಕ್ರೀಡೆಗಳಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರು. ಅಲ್ಲದೆ ಬ್ರಜಿಲ್ ನ ರೀ ಡಿ ಜನೇರೋ ದಲ್ಲಿ ನಡೆದ ಪರೀಕ್ಷಾರ್ಥ ಜಿಮ್ನ್ಯಾಸ್ಟಿಕ್ ಕ್ರೀಡೆಗಳಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಒಲಂಪಿಕ್ಸ್ ಜಿಮ್ನಾಸ್ಟಿಕ್ಸ್ ಗೆ ಆಯ್ಕೆಯಾದ ಮೊದಲ ಭಾರತೀಯ ಮಹಿಳೆ ಎಂಬ ಹೆಮ್ಮೆಗೆ ಪಾತ್ರರಾಗಿದ್ದಾರೆ. ಇವರಿಗೆ ಕಳೆದ ವರ್ಷ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.  



ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com